ಸುದ್ದಿ9 ಮಂಗಳೂರು :ಕರಾವಳಿ ಉತ್ಸವಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ಮಂಗಳೂರು ನೆಹರೂ ಮೈದಾನದಿಂದ ಲಾಲ್ಭಾಗ್ ಸಮೀಪದ ಕರಾವಳಿ ಉತ್ಸವ ಮೈದಾನದವರೆಗೆ ಸುಮಾರು ಒಂದೂವರೆ ಗಂಟೆವರೆಗೆ ವೈಭವದ ಮೆರಣಿಗೆ ನಡೆಯಿತು.
ವರ್ಣರಂಜಿತ ಮೆರವಣಿಗೆಗೆ ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಚಾಲನೆ ನೀಡಿದರು. ಸಚಿವ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಕರಾವಳಿ ಉತ್ಸವ ಮೆರವಣಿಗೆ ಸಮಿತಿ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ನೇತೃತ್ವ ವಹಿಸಿದ್ದರು.
ಮೆರವಣಿಗೆಯು ನೆಹರೂ ಮೈದಾನದಿಂದ ಹೊರಟು ಎ.ಬಿ.ಶೆಟ್ಟಿ ಸರ್ಕಲ್, ಪುರಭವನ, ಹಂಪನಕಟ್ಟೆ ವೃತ್ತ, ಕೆ.ಎಸ್.ರಾವ್ ರಸ್ತೆ, ನವಭಾರತ್ ವೃತ್ತ, ಪಿ.ವಿ.ಎಸ್.ವೃತ್ತ, ಲಾಲ್ಭಾಗ್ ಮೂಲಕ ಮಂಗಳಾ ಕ್ರೀಡಾಂಗಣದವರೆಗೆ ಸಾಗಿಬಂತು.













