ಕೈಕಂಬ: ವಿಹಾನಿ ಎಸ್. ಕೋಟ್ಯಾನ್ ತಮ್ಮ 2 ವರ್ಷ 4 ತಿಂಗಳ ವಯಸ್ಸಿನಲ್ಲಿ ಇಂಗ್ಲಿಷ್ ವರ್ಣಮಾಲೆಯ ಎಲ್ಲಾ ಅಕ್ಷರಗಳು, ಒಂದು ನರ್ಸರಿ ರೈಮ್ (ಬಾಲಗೀತೆ), ವಾರದ ದಿನಗಳು, 2 ಶ್ಲೋಕಗಳು ಹಾಗೂ 1 ರಿಂದ 10 ರವರೆಗಿನ ಸಂಖ್ಯೆಗಳನ್ನು ಪಠಿಸುವ ಮೂಲಕ ಇಂಡಿಯಾ ಬುಕ್ ಅಫ್ ರೇಕಾಡ್೯ ವತಿಯಿಂದ “ಐಬಿಆರ್ ಅಚಿವರ್ ಗೌರವವನ್ನು ಪಡೆದಿದ್ದಾರೆ.

ಈಕೆ ಉಡುಪಿಯ ಸಚ್ಚಿನ್ ಕೋಟ್ಯಾನ್ – ಮಳಲಿ ಮಟ್ಟಿಯ ದಿವ್ಯಾ ಸಾಲಿಯಾನ್ ದಂಪತಿ ಪುತ್ರಿಯಾಗಿದ್ದಾಳೆ.

