oppo_2

ಬಂಟ್ವಾಳ: ರಾಷ್ಟ್ರೀಕೃತ ಬ್ಯಾಂಕ್ ಗಳ ತವರು ಜಿಲ್ಲೆಯಲ್ಲಿ ಪ್ರಸಕ್ತವಾಗಿ ಬ್ಯಾಂಕ್ ಗಳು ವಿಲೀನಗೊಂಡು ಕಾರ್ಯ ನಿರ್ವಹಿಸುತ್ತಿದ್ದರೆ . ಸಹಕಾರಿ ಸಂಘಗಳು ಜನರ ಅನುಕೂಲಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುವುದಲ್ಲದೆ ನೂರಕ್ಕೆ ನೂರರಷ್ಟು ಸಾಲ ವಸೂಲಾತಿಯನ್ನು ಮಾಡುವ ಮೂಲಕ ಜನರ ಸೇವೆಗೆ ಬದ್ದವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ.,ದ ಅಧ್ಯಕ್ಷರು,ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ.,ದ ಅಧ್ಯಕ್ಷರು ಆದ ‘ಸಹಕಾರ ರತ್ನ’ ಡಾ। ಎಂ. ಎನ್. ರಾಜೇಂದ್ರ ಕುಮಾರ್ ಅವರು ಹೇಳಿದ್ದಾರೆ.

oppo_2


ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು,ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ., ಮಂಗಳೂರು ಬಂಟ್ವಾಳ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂಇತರ ಸಹಕಾರ ಸಂಘಗಳ ಸಹಕಾರದೊಂದಿಗೆ ಬಂಟ್ವಾಳ ತಾಲೂಕಿನ   ಮಣಿನಾಲ್ಕೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,ದ ಆಶ್ರಯದಲ್ಲಿ ಸರಪಾಡಿ ದಿ. ಎನ್. ಸುಬ್ಬಣ್ಣ ಶೆಟ್ಟಿ ಸಭಾಂಗಣದಲ್ಲಿ‌ ಮಂಗಳವಾರ
“73 ಸಹಕಾರ ಸಪ್ತಾಹ ಸಮಾರಂಭ- 2026” ದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಮಹಿಳೆಯರು ಕೂಡ ಸ್ವಾವಲಂಬಿ ಜೀವನ ನಡೆಸಬೇಕೆಂಬ ಉದ್ದೇಶವನ್ನಿರಿಸಿಕೊಂಡು 25 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ತರಲಾದ ನವೋದಯ ಸ್ವಸಹಾಯ ಸಂಘ ಈಗ 8 ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.ನವೋದಯ ಸ್ವಸಹಾಯ ಸಂಘದ ಸದಸ್ಯೆಯರ ಮಕ್ಕಳು ಕೂಡ ತಮ್ಮ ಬದುಕಿನಲ್ಲಿ ಉನ್ನತ ಸ್ಥಾನಕ್ಕೇರುವ ನಿಟ್ಟಿನಲ್ಲಿ ಶಿಕ್ಷಣ , ಸ್ವದ್ಯೋಗ, ಕೈಗಾರಿಕೆಯನ್ನು ಸ್ಥಾಪಿಸುವುದಾದರೆ ಅವರಿಗೆ ಸಂಘದಿಂದ ಸಾಲ ವಿತರಿಸಲು ಬದ್ದವಾಗಿದೆ ಎಂದರು,


ಆರಂಭಿಕ ಹಂತದಲ್ಲಿಸಣ್ಣ ಕಟ್ಟಡದಲ್ಲಿ ವ್ಯವಹಾರ ಆರಂಭಿಸಿದ್ದ ಮಣಿನಾಲ್ಕೂರು ಪ್ರಾ‌ ಕೃ.ಪ.ಸ. ಸಂಘ ನಿ.,ಹೋರಾಟಗಾರ,ಸಾಮಾಜಿಕ ಚಿಂತಕ ದಿ.ಸರಪಾಡಿ ಸುಬ್ಬಣ್ಣ ಶೆಟ್ಟಿ ಅವರ ಪ್ರಯತ್ನದ ಫಲವಾಗಿ ಈ ಸಂಸ್ಥೆ ಗ್ರಾಮದ ಜನರ ಅವಶ್ಯಕತೆಗೆ ತಕ್ಕಂತೆ ಕಾರ್ಯನಿರ್ವಹಿಸಿ ಇದೀಗ ಪ್ರಸಕ್ತ ರಾಧಕೃಷ್ಣ ಮಯ್ಯ ಅವರ ಅಧ್ಯಕ್ಷತೆಯ ಆಡಳಿತ ಮಂಡಳಿಯ ಕಾರ್ಯನಿರ್ವಹಣೆಯಿಂದ ಕೋಟ್ಯಾಂತರ ರೂ.ಲಾಭಗಳಿಸಿ ಅಭಿವೃದ್ದಿ ಪಥದತ್ತ ಮುನ್ನಡೆಯುತ್ತಿರುವುದು ಅಭಿನಂದನೀಯವಾಗಿದೆ ಎಂದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು 73 ನೇ ಸಹಕಾರಿ ಸಪ್ತಾಹವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೈದು ಮಾತನಾಡಿ,ಕುಗ್ರಾಮವಾಗಿದ್ದ ಸರಪಾಡಿ ಪರಿಸರ ಹೋರಾಟಗಾರರಾದ ದಿ.ಸರಪಾಡಿ
ಸುಬ್ಬಣ್ಣ ಶೆಟ್ಟಿ ಅವರ ಹೋರಾಟದ ಫಲವಾಗಿ ಸಾಕಷ್ಟು ಅಭಿವೃದ್ಧಿಗೊಂಡಿರುವುದನ್ನು ಕಾಣುವಂತಾಗಿದೆ. ಸಹಕಾರಿ ಸಂಘವು
ಕೋಟ್ಯಾಂತರ ರೂ.ಲಾಭ ದೊಂದಿಗೆ ಶೇ.100 ರಷ್ಟು ವಸೂಲಾತಿ ಮಾಡಿರುವುದು ಅಭಿನಂದನೀಯವಾಗಿದೆ ಎಂದರು.
ಜಿಲ್ಲೆಯಲ್ಲಿರುವ  ರಾಷ್ಟ್ರೀಕೃತ ಬ್ಯಾಂಕ್ ಗಳ  ನಡುವೆ” ಸಹಕಾರಿ ರತ್ನ” ಡಾ.ಎಂ.ಎನ್  ರಾಜೇಂದ್ರ ಕುಮಾರ್ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಸಹಕಾರಿಸಂಘಗಳು ಅತ್ಯಂತ ಬಲಿಷ್ಠವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದ ಅವರು ರಾಷ್ಟ್ರೀಕೃತ ಬ್ಯಾಂಕುಗಳು ದಾಖಲೆ ನೋಡಿ ಸಾಲ ನೀಡಿದರೆ ಸಹಕಾರಿ ಸಂಘಗಳು
ವ್ಯಕ್ತಿಯ ವ್ಯಕ್ತಿತ್ವವನ್ನು ಪರಿಗಣಿಸಿ ಸಾಲ ನೀಡುತ್ತಿದೆ ಎಂದರು.


ಇದಕ್ಕು ಮೊದಲು ದ.ಕ. ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ  ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಸಹಕಾರಿ ಧ್ವಜಾರೋಹಣಗೈದು ಮಾತನಾಡಿ,ದ.ಕ.ಜಿಲ್ಲೆಯಲ್ಲಿ ಸಹಕಾರಿ ರಂಗ ವಿಶೇಷವಾದ ಸಾಧನೆಗೈಯುತ್ತಿದೆ.   ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು ಸ್ಥಾಪಿಸಿರುವ ನವೋದಯ ಸ್ವಸಹಾಯ ಸಂಘದ ಮೂಲಕ ಮಹಿಳೆಯರು ಕೂಡ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ,ತಂತ್ರಜ್ಞಾನ, ಕೌಶಲ್ಯಾಧಾರಿತ, ವೃತ್ತಿಪರ ಸೇವೆ  ಎಂಬ ಧ್ಯೇಯದೊಂದಿಗೆ ಸಪ್ತಾಹ ನಡೆಯುತ್ತಿದೆ ಎಂದರು.


ಸಪ್ತಾಹ ದಿನದ ವಿಷಯವಾಗಿ ಸಹಕಾರ ಸಂಸ್ಥೆಗಳ ಮೂಲಕ “ಮೌಲ್ಯವರ್ಧನೆ – ಬ್ರಾಂಡ್ ನಿರ್ಮಾಣ”ದ ಕುರಿತು ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ.ದ ನಿರ್ದೇಶಕ ಟಿ. ಜಿ. ರಾಜಾರಾಮ್ ಭಟ್ ಅವರು ವಿಚಾರ ಮಂಡಿಸಿದರು.
ಮಾಜಿ ಶಾಸಕ,ಈ ಸಾಲಿನ ಸಹಕಾರರತ್ನ ಪ್ರಶಸ್ತಿ ಪುರಸ್ಕೃತರಾದ ಪದ್ಮನಾಭ ಕೊಟ್ಟಾರಿ,ಸ್ಕ್ಯಾಡ್ಸ್ ಲಿ. ಅಧ್ಯಕ್ಷ  ರವೀಂದ್ರ ಕಂಬಳಿ, ದ.ಕ. ಜಿಲ್ಲಾ ಸಹಕಾರ ಯೂನಿಯನ್ ನಿಯಮಿತದ ನಿರ್ದೇಶಕರಾದ ಸಂಜೀವ ಪೂಜಾರಿ ಬೊಳ್ಳಾಯಿ, ಸವಿತಾ ಎನ್ ಶೆಟ್ಟಿ,
ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ನಿ.ದ ನಿರ್ದೇಶಕರಾದ ನಂದರಾಮ ರೈ, ಮಂಗಳೂರು ಉಪನಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ತ್ರಿವೇಣಿ ರಾವ್ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಟಿ.ಜಿ.ರಾಜಾರಾಮ ಭಟ್, ಶಶಿಕುಮಾರ್ ಬಾಲ್ಯೊಟ್ಟು, ಪದ್ಮನಾಭ ಕೊಟ್ಟಾರಿ, ನಿವೃತ್ತ ಮುಖ್ಯ ಕಾರ್ಯ ನಿರ್ವಹಣಾಽಕಾರಿ ಯಶೋಧರ ಗೌಡ ದಂಪತಿಯನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಗಿರಿಧರ ನಾಯ್ಕ, ನಿರ್ದೇಶಕರಾದ ಎನ್. ಧನಂಜಯ ಶೆಟ್ಟಿ, ದಯಾನಂದ ಶೆಟ್ಟಿ, ನಿಶಾಂತ್ ಕುಮಾರ್ ಶೆಟ್ಟಿ, ಕೃಷ್ಣಪ್ಪ, ಪೂವಪ್ಪ ಪೂಜಾರಿ, ತಿಲಕ್ ಬಂಗೇರ, ಕುಶಾಲಾಕ್ಷಿ, ವಸಂತಿ,ವಿಶ್ವನಾಥ ನಾಯ್ಕ, ವಿಶ್ವನಾಥ ಪೂಜಾರಿ, ವೃತ್ತಿಪರ ನಿರ್ದೇಶಕ ಎಚ್. ಸುಧಾಕರ ಶೆಟ್ಟಿ,  ಡಿಸಿಸಿ ಬ್ಯಾಂಕ್ ಪ್ರತಿನಿಧಿಗಳಾದ ಕೀರ್ತಿರಾಜ್‌ಮತ್ತು ಯೋಗೀಶ್ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ರಾಧಕೃಷ್ಣ ಮಯ್ಯ  ಅವರು ಸ್ವಾಗತಿಸಿ,ಪ್ರಸ್ತಾವನೆಗೈದು ಪ್ರಸಕ್ತವಾಗಿ ಸಂಘವು 363 ಕೋ.ರೂ.ವ್ಯವಹಾರ ನಡೆಸಿದ್ದು,61 ಕೋ.ರೂ.ಠೇವಣಿ ಹೊಂದಿದ್ದು,1 ಕೋ.ರೂ ಅಧಿಕ ಲಾಭಗಳಿಸಿದೆ ಎಂದರು. ಸಂಘದ  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಹಾಸ ಅವರು ವರದಿ ವಾಚಿಸಿದರು.


ಇದೇ ವೇಳೆ ಚೈತನ್ಯ ವಿಮಾ ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.
ದ.ಕ.ಜಿಲ್ಲಾ  ಸಹಕಾರ ಯೂನಿಯನ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಸ್.ವಿ.ಹಿರೇಮಠ ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಿಬ್ಬಂದಿಗಳು ಸಹಕರಿಸಿದರು.

By Suddi9