ಬಂಟ್ವಾಳ: ಸೀನಿಯರ್ ಚೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಸಂಗಮ ಘಟಕದಿಂದ ದೀಪಾವಳಿ ಕುಟುಂಬ ಸಹಮಿಲನ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಬಿ.ಸಿ.ರೋಡಿನ ಅಕ್ಷಯ ಸೌಧದಲ್ಲಿ ಜರಗಿತು.

ಎಸ್.ಸಿ.ಐ. ರಾಷ್ಟ್ರೀಯ ಉಪಾಧ್ಯಕ್ಷರಾದ ಅಕ್ಷತಾ ಮುಖ್ಯ ಅತಿಥಿಯಾಗಿ ಮಾತನಾಡಿದರು.ಮಾಜಿ ಅಧ್ಯಕ್ಷ ರಾದ ಡಾ.ಆನಂದ ಬಂಜನ್ ಮತ್ತು ಸೀನಿಯರ್ ಆದಿರಾಜ ಜೈನ್ ಇವರಿಗೆ ಪಿಪಿಎಫ್ ಪರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ದೀಪಾವಳಿ ಹಬ್ಬದ ಆಚರಣೆಯ ಐತಿಹಾಸಿಕ ಹಿನ್ನೆಲೆ ಮತ್ತು ವಿಶ್ವಯಾಪಿಯಾಗಿ ಆಚರಿಸಲ್ಪಡುವ ಬೆಳಕಿನ ಹಬ್ಬದ ವಿಶೇಷತೆಯನ್ನು ಬಂಟ್ವಾಳ ತಾಲೂಕು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಕುಕ್ಕಾಜೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಎಸ್.ಸಿ.ಐ.ಸದಸ್ಯರಾಗಿರುವ ವರ್ತಕರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ,ಹಿರಿಯ ರಾಜಕಾರಣಿ ಸಾಮಾಜಿಕ ಕಾರ್ಯಕರ್ತ ಪಿ.ಎ.ರಹೀಂ ಮತ್ತು ಝೀ ಕನ್ನಡ ನ್ಯೂಸ್ ಕರ್ನಾಟಕ ಐಡಲ್ 2026 ಪ್ರಶಸ್ತಿ ಪುರಸ್ಕೃತ ಸದಾನಂದ ಬಂಗೇರ ಇವರನ್ನುಅಭಿನಂದಿಸಿ ಸನ್ಮಾನಿಸಲಾಯಿತು.
ಲೀಜನ್ ಅಧ್ಯಕ್ಷ ತೇವು ತಾರನಾಥ ಕೊಟ್ಟಾರಿ ಅಧ್ಯಕ್ಷತೆ ವಹಿಸಿ ಎಲ್ಲರನ್ನೂ ಅಭಿನಂದಿಸಿದರು.
ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ, ಕೋಶಾಧಿಕಾರಿ ಮೊಹಮ್ಮದ್ , ಸಹಕಾರ್ಯದರ್ಶಿ ಸನ್ಮತಿ ಇಂದ್ರ ,ಸದಸ್ಯರಾದ ಕರುಣೇಂದ್ರ ಪೂಜಾರಿ, ಶಿಕ್ಷಕ ರಾಮಕೃಷ್ಣ ರಾವ್, ಯೋಗೀಶ್ ಬಂಗೇರ,ಹರಿಶ್ಚಂದ್ರ ಆಳ್ವ, ರಾಜಾರಾಮ ಐತಾಳ್, ಪ್ರಮೀಳಾ ಮಾಣೂರು ಮೊದಲಾದವರು ಉಪಸ್ಥಿತರಿದ್ದರು.ಕಾರ್ಯಕ್ರಮ ಸಂಯೋಜಕ ಜಯಗಣೇಶ ನಿರೂಪಿಸಿ, ಕಾರ್ಯದರ್ಶಿ ರೇಖಾ ರಾವ್ ವಂದಿಸಿದರು.
