ಬಂಟ್ವಾಳ: ಇಲ್ಲಿನ ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯ ಹಾಗೂ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತಾಶಯದಲ್ಲಿ ಕನ್ನಡ ರಾಜೋಚಿತವವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತುಂಬೆ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಅಬ್ದುಲ್ ರಹಿಮಾನ್ ಡಿ. ಬಿ. ಮಾತನಾಡಿ, ಕನ್ನಡ ಭಾಷೆ,ಸಂಸ್ಕೃತಿ ,ಸಾಹಿತ್ಯ ಇಡೀ ದೇಶದಲ್ಲಿ ವಿಶೇಷ ಸ್ಥಾನಮಾನ ಮೌಲ್ಯವನ್ನು ಪಡೆದಿದ್ದು ಇದನ್ನು ಉಳಿಸಿ ಬೆಳೆಸುವ, ಕಲಿಸುವ, ಜವಾಬ್ದಾರಿ ಎಲ್ಲಾ ಕನ್ನಡಿಗರ ಮೇಲಿದ್ದು, ಈ ಮೂಲಕ ನಾವು ಕನ್ನಡಾಂಬೆಯ ಋಣವನ್ನು ತೀರಿಸಬೇಕಾಗಿದೆ ಎಂದು ಹೇಳಿದರು,.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ ಡಿ ಮಂಚಿ ಮಾತನಾಡುತ್ತಾ ಕನ್ನಡವು ಅನ್ಯ ಭಾಷೆಗಳ ಆಕ್ರಮಣಕ್ಕೆ ಬಲಿಯಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಭೀತಿಯ ಸ್ಥಿತಿಯಲ್ಲಿದ್ದು ಕನ್ನಡಿಗರಾದ ನಾವೆಲ್ಲರೂ ಜಾಗೃತಗೊಂಡು ದಿನನಿತ್ಯದ ಬದುಕಿನ ವ್ಯವಹಾರ, ಶಿಕ್ಷಣ, ಮಾತುಕತೆ, ಸಾಹಿತ್ಯ ಕ್ಷೇತ್ರಗಳಲ್ಲಿ ಕನ್ನಡವನ್ನು ಮಾಧ್ಯಮವಾಗಿ ಬಳಸಿ ಉಳಿಸಿ, ಬೆಳೆಸಿ, ಕಲಿಸಬೇಕಾದ ಅಗತ್ಯವಿದೆಯೆಂದು ಹೇಳಿದರು, ವೇದಿಕೆಯಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬಿ.ಸುದರ್ಶನ್, ಕನ್ನಡ ವಿಭಾಗದ ಮುಖ್ಯಸ್ಮರಾದ ಕೆ.ಶಿವಣ್ಣ ಪ್ರಭು, ಉಪಸ್ಥಿತರಿದ್ದರು. ಕುಮಾರಿ ತನ್ನಿ ಸ್ವಾಗತಿಸಿ, ಕುಮಾರಿ ಗಾನ ವಂದಿಸಿದರು.ಕುಮಾರಿ ಸ್ಫೂರ್ತಿ ಕಾರ್ಯಕ್ರಮ ನಿರ್ವಹಿಸಿದರು.
