ಬಂಟ್ವಾಳ:ಕಲ್ಲಡ್ಕ ಶ್ರೀ ಶಾರದಾ ಸೇವಾ ಪ್ರತಿಷ್ಠಾನ (ರಿ) ಇದರ ವತಿಯಿಂದ 49ನೇ ವರ್ಷದ ಶಾರದೋತ್ಸವವು ಅ. 17 ರಿಂದ 20 ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದ್ದು,ಈ ಸಂದರ್ಭ ನೀಡಲಾಗುವ “ಶಾಂತ ಶ್ರೀ” ಪ್ರಶಸ್ತಿಗೆ ಕಲಾರಾದಕ, ಕಲಾಪೋಷಕ ಮತ್ತು ಬಲ್ನಾಡು ಉಳ್ಳಾಲ್ತಿ ಪಾತ್ರಿಯಾಗಿರುವ ಬಿ.ಕೆ. ರಾಜ್ ನಂದಾವರ ಅವರು ಆಯ್ಕೆಯಾಗಿದ್ದಾರೆ.

ಅ. 11ರಂದು ಮಾರ್ನೆಮಿದ ಗೊಬ್ಬು ವಿಶೇಷ ಕ್ರೀಡಾಕೂಟ, ಅ. 17ರಂದು ವೇದಮೂರ್ತಿ ಪಳನೀರು ಶ್ರೀಪತಿ ಭಟ್ ಇವರಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶಾರದಾ ಮಾತೆಯ ಪ್ರತಿಷ್ಠಾಪನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ. ಅಂದು ರಾತ್ರಿ ವಿದುಷಿ ವಿದ್ಯಾ ಮನೋಜ್ ರವರ ಶಿಷ್ಯೆಯರಿಂದ ಭರತನಾಟ್ಯ ಮತ್ತು ಸ್ಥಳೀಯ ಪ್ರತಿಭೆ ಹಾಗೂ ನಾಟ್ಯ ವೇದ ಮತ್ತು ಚಿಂತಾಮಣಿ ತಂಡಗಳಿಂದ ನಾಟ್ಯ ವೈವಿಧ್ಯ ನಡೆಯಲಿದೆ.
ಅ. 18ರಂದು ಮಧ್ಯಾಹ್ನ ದುರ್ಗಾಹೋಮದ ಪೂರ್ಣಾಹುತಿ ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಈ ಶಾಂತಶ್ರೀ ಪ್ರಶಸ್ತಿ ಪ್ರದಾನ , ಸುಮಾರು 45 ವರ್ಷಗಳಿಂದ ನೆಟ್ಲ ದೇವಸ್ಥಾನದಲ್ಲಿ ಡೋಲು ಬಾರಿಸುವ ಶ್ರೀನಿವಾಸ ದೇವಾಡಿಗ ನೆಟ್ಲ ಇವರಿಗೆ ಗ್ರಾಮ ಗೌರವ ಮತ್ತು ಚಲನಚಿತ್ರ ನಿರ್ಮಾಪಕ, ನಿರ್ದೇಶಕರಾದ ಪ್ರಶಾಂತ್ ಕಲ್ಲಡ್ಕ ಇವರಿಗೆ ಪ್ರತಿಭಾ ಪುರಸ್ಕಾರವು ನಡೆಯಲಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 90 ಶೇಕಡಾ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಲಿದೆ.
ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಸುಲೋಚನಾ ಜಿ.ಕೆ. ಭಟ್ ವಹಿಸಲಿದ್ದು , ಡಾ. ರವೀಶ್ ಪಡುಮಲೆ ಅವರು ಧಾರ್ಮಿಕ ಉಪನ್ಯಾಸ ಮಾಡಲಿದ್ದಾರೆ. ರಾತ್ರಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.ಅ. 19ರಂದು ಬೆಳಗ್ಗೆ ಅಕ್ಷರಭ್ಯಾಸ ಮತ್ತು ರಾತ್ರಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಅ.20ರಂದು ಸಣ್ಣ ಹೆಣ್ಣು ಮಕ್ಕಳಿಗೆ ಮೂಗು ಚುಚ್ಚುವ ನಾಸಿಕ ವೇದ ಕಾರ್ಯಕ್ರಮ ಮತ್ತು ಆಯುಧ ಪೂಜೆಯು ನಡೆಯಲಿದೆ.
ಸಂಜೆ ದೇವಿಗೆ ಮಹಾಮಂಗಳಾರತಿ ನಡೆದು ಬಳಿಕ ಕಲ್ಲಡ್ಕ ರಾಜರಸ್ತೆಯಲ್ಲಿ ವೈಭವದ ಶೋಭಯಾತ್ರೆ ನಢಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಯತೀನ್ ಕುಮಾರ್ ಕಾರ್ಯದರ್ಶಿ ವಜ್ರನಾಥ ಕಲ್ಲಡ್ಕ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
