ಬಂಟ್ವಾಳ: ಬಿ.ಸಿ.ರೋಡಿಗೆ ಸಮೀಪದ ಮೊಡಂಕಾಪು ವಿದ್ಯಾ ಸಂಸ್ಥೆಯಲ್ಲಿ ಸತತ 42 ವರ್ಷಗಳ ಕಾಲ ಅಕ್ಷರ ಜ್ಞಾನದಿ ಬೆಳಗಿ,  ನಾಲ್ಕು ವರ್ಷಗಳ ಕಾಲ ಶಾಲೆಯ ಮುಖ್ಯೋಪಾಧ್ಯಾಯಿನಿ ಯಾಗಿ ಸೇವೆ ಸಲ್ಲಿಸಿದ  ತೆರೆಜಾ ಲೌವಂತಿ ಡಿಮೆಲ್ಲೊ ಅವರಿಗೆ ಸಂಸ್ಥೆಯ ವತಿಯಿಂದ  ಹೃದಯಸ್ಪರ್ಶಿ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭ  ನಡೆಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಜೊತೆ ಕಾರ್ಯದರ್ಶಿಗಳಾದ ಅತೀ ವಂದನೀಯ ಸ್ವಾಮಿ ವಿಕ್ಟರ್ ಡಿಸೋಜರವರು, “ತರೆಜಾ ಮೇಡಂ ಅವರ ಸುದೀರ್ಘ 42 ವರ್ಷಗಳ ನಿಸ್ವಾರ್ಥ ಸೇವೆ ಶಾಲೆಯ ಬೆಳವಣಿಗೆಗೆ ಶಕ್ತಿ ನೀಡಿದೆ. ಅವರ ಶಿಸ್ತು ಮತ್ತು ಕರ್ತವ್ಯನಿಷ್ಠೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.
ಶಾಲೆಯ ನಿಯೋಜಿತ ಮುಖ್ಯೋಪಾಧ್ಯಾಯರು  ಸುನಿಲ್ ಫ್ರಾನ್ಸಿಸ್ ಲೂವಿಸ್ ಮಾತನಾಡಿ, ಶಿಕ್ಷಕರ ಪರವಾಗಿ ತೆರೆಜಾ ಅವರೊಂದಿಗೆ ಹಂಚಿಕೊಂಡ ಕೆಲಸದ ಕ್ಷಣಗಳನ್ನು ನೆನಪಿಸಿಕೊಂಡು ತಮ್ಮ ಒಡನಾಟದ ನೆನಪುಗಳನ್ನು ಬಿಚ್ಚಿಟ್ಟರು.
ವಿದ್ಯಾರ್ಥಿ ನಾಯಕಿ ಫಾತಿಮ ಅಫಾ ವಿದ್ಯಾರ್ಥಿಗಳ ಪರವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರೆ, ಪೋಷಕರ ಪರವಾಗಿ ಮಲ್ಲಿಕಾರವರು ಶುಭ ಶಂಸನೆಗೈದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಾನಿ ತೆರೆಜಾ ಲೌವಂತಿ ಡಿಮೆಲ್ಲೊ ಅವರನ್ನು ಸನ್ಮಾನಿಸಿ, ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ಶಾಲಾ ವಿದ್ಯಾರ್ಥಿಗಳು ನೆನಪಿನ ಕಾಣಿಕೆಗಳನ್ನಿತ್ತರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರು,ನ್ಯಾಯವಾದಿ ಅರುಣ್  ರೋಶನ್ ಡಿಸೋಜ ಹಾಗೂ ಕಾರ್ಯದರ್ಶಿ ರಮಿತಾ ಉಪಸ್ಥಿತರಿದ್ದರು.
ಶಿಕ್ಷಕಿ ಲೀನಾ ಡಿಮೆಲ್ಲೋ  ಸ್ವಾಗತಿಸಿದರು. ಶಿಕ್ಷಕಿ  ಗೀತಾ ಕಾರ್ಯಕ್ರಮ  ನಿರೂಪಿಸಿದರು.  ಶಿಕ್ಷಕಿ ಲವೀನಾ ಡಿಸೋಜ  ವಂದಿಸಿದರು. 

By Suddi9

Leave a Reply

Your email address will not be published. Required fields are marked *