ಬಂಟ್ವಾಳ :ಮಾನವಿಕ ವಿಭಾಗದ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಜೀವನ ಕೌಶಲ್ಯಗಳನ್ನು ಕಲಿತು ಅಳವಡಿಸಿಕೊಳ್ಳಬೇಕು. ತಮ್ಮ ಬದುಕನ್ನು ಸಮಾಜದೊಂದಿಗೆ ಸದಾ ತೆರೆದಿಟ್ಟುಕೊಂಡಿರಬೇಕು. ಆಗ ಆತನ ನಿಜವಾದ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ ಎಂದು ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜು ಪ್ರಾಂಶುಪಾಲರಾದ ಪ್ರೊ. ಎಂ.ಡಿ. ಮಂಚಿ. ಹೇಳಿದರು. 
 ಕಾಲೇಜಿನ ಮಾನವಿಕ ಸಂಘದ ಆಶ್ರಯದಲ್ಲಿ ನಡೆದ ವಿಭಾಗದ ವಿದ್ಯಾರ್ಥಿಗಳಿಗೆ ಸಿಗುವ ಉದ್ಯೋಗಾವಕಾಶಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕಾಲೇಜಿನ ಸಸ್ಯಶಾಸ್ತ್ರವಿಭಾಗ ಮುಖ್ಯಸ್ಥ ಡಾ|ವಿನಾಯಕ ಕೆ.ಎಸ್ ಮಾತನಾಡಿ ಶಿಕ್ಷಣ ಮತ್ತು ಉದ್ಯೋಗ ಪರಸ್ಪರ ಸಂಬಂಧಿಯಾದವು.ಉದ್ಯೋಗ ಕ್ಷೇತ್ರದಲ್ಲಿ ವಿವಿಧ ಅವಕಾಶಗಳಿವೆ.
 
ಆದರೆ ಅವು ನಮ್ಮನ್ನು ಅರಸಿ ಬರುವುದಿಲ್ಲ,ನಾವು ಅವುಗಳ ಬೆನ್ನತ್ತಿ ಹೋಗಬೇಕು, ಉತ್ತಮ ಉದ್ಯೋಗ ಪಡೆಯುವಲ್ಲಿ ಸಾಕಷ್ಟು ಅಧ್ಯಯನ ಮತ್ತು ಸತತ ಪ್ರಯತ್ನಬೇಕು ಆಗ ಮಾತ್ರ ನಮ್ಮ ಜೀವನ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದರು.
 
ಮಾನವಿಕ ಸಂಘದ ಅಧ್ಯಕ್ಷತೆ  ರಕ್ಷಿತಾ ರೈ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಧನ್ಯಶ್ರೀ ಸ್ವಾಗತಿಸಿದರು. ಗಾನ ವಂದಿಸಿದರು. ಸ್ಪೂರ್ತಿ ಎಂ ಕಾರ್ಯಕ್ರಮ ನಿರೂಪಿಸಿದರು. ಶ್ರುತಿ ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕಿ  ರಂಜನಿ ಸಹಕರಿಸಿದರು. 

By Suddi9

Leave a Reply

Your email address will not be published. Required fields are marked *