ಬಂಟ್ವಾಳ:ಇಲ್ಲಿನ ಭಂಡಾರಿಬೆಟ್ಟು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 75ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಂಭ್ರಮ,ಸಡಗರದಿಂದ ನಡೆಯಿತು.
ಶ್ರೀಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್ ಮತ್ತು ಕುಸರುಕುಡಿಕೆ ಉತ್ಸವ ಸಮಿತಿ ಹಾಗೂ ಮಾತೃ ಬಳಗ ವತಿಯಿಂದ ಮೂರು ದಿನಗಳ ಮೊಸರುಕುಡಿಕೆ ಉತ್ಸವದ ಎರಡನೇ ದಿನವಾದ ಶನಿವಾರ ವೈಭವಪೂರ್ಣವಾದ ಶೋಭಾಯಾತ್ರೆಯು ಬಂಟ್ವಾಳ ನಗರದಲ್ಲಿ ನಡೆಯಿತು.

ಭಂಡಾರಿಬೆಟ್ಟಿನಿಂದ ಹೊರಟಶ್ರೀಕೃಷ್ಣ ಭಾವಚಿತ್ರ ಮಂಟಪ ಸಹಿತ ಶೋಭಾಯಾತ್ರೆಯು ತ್ಯಾಗರಾಜರಸ್ತೆಯಲ್ಲಿ ಕೃಷ್ಣಮಠಕ್ಕೆ ತೆರಳಿ ಅಲ್ಲಿ ವಿಶೀಷ ಪೂಜೆ ನಡೆದು ರಥಬೀದಿಯಲ್ಲಿ ಸಾಗಿ ಬಂದು ಬಡ್ಡಕಟ್ಟೆ ಹನುಮಾನ್ ದೇವಸ್ಥಾನದ ವರೆಗೆ ತೆರಳಿ ವಾಪಾಸ್ ಅದೇ ದಾರಿಯಾಗಿ ಬಂದು ಕಾಲೇಜ್ ರಸ್ತೆಯಾಗಿ ತೆರಳಿ ಬೈಅಸ್ ಜಂಕ್ಷನ್ ನಿಂದ ಹೆದ್ದಾರಿ ಮೂಲಕ ಎಸ್ ವಿಎಸ್ ದೇವಳದ ಮೈದಾನದಲ್ಲಿ ಸಂಪನ್ನಗೊಂಡಿತು. ಈ ಸಂದ ರ್ಭ ರಸ್ತೆಯುದ್ದಕ್ಕು ನಿರ್ಮಿಸಲಾದ ಶ್ರೀಕೃಷ್ಣನ ಬಾಲಲೀಲೋತ್ಸವ ಪ್ರತೀಕವಾದ ಮೊಸರು ಕುಡಿಕೆಗಳನ್ನು ಭಂಡಾರಿಬೆಟ್ಟು ಯುವಜನ ವ್ಯಾಯಾಮ ಶಾಲೆಯ ಸದಸ್ಯರು ಪಿರಮಿಡ್ ರಚಿಸಿ ಒಡೆಯುವ ಮೂಲಕ ಸಂಭ್ರಮಿಸಿದರು.
ಸಂಜೆಯ ಪುಟಾಣಿಗಳ ಶ್ರೀಕೃಷ್ಣ ವೇಷ ಸ್ಪರ್ಧೆ, ಮಲ್ಲಕಂಬ ಸ್ಪರ್ಧೆ, ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ಮತ್ತು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ವಿವಿಧ ಸಮಿತಿ ಪದಾಧಿಕಾರಿಗಳು ಈಸಂದರ್ಭ ಉಪಸ್ಥಿತರಿದ್ದರು.
