ಬಂಟ್ವಾಳ: ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಸೇವಾಮನೋಭಾವವನ್ನು ಬೆಳಸಿಕೊಂಡಾಗ ವಿದ್ಯೆಗೆ ಹೆಚ್ಚಿನ ಮಹತ್ವಬರುತ್ತದೆ. ಯುವಜನತೆ ತನ್ನೊಂದಿಗೆ ಸಮಾಜದ ಇತರೆ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವ ಮನಸ್ಥಿತಿಯನ್ನು ಹೊಂದಬೇಕು ಎಂದು ಬಂಟ್ವಾಳದ ಬಿ.ಆರ್.ಎಂ.ಪಿ.ಸಿ. ಶಾಲೆಯ ಶಿಕ್ಷಕರಾದ ಮನೋಹರ ಎಸ್ ದೊಡಮನಿ ಹೇಳಿದರು.

ಬಂಟ್ವಾಳ ಶ್ರೀ ವೆಂಕಟರಮಣಸ್ವಾಮೀ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಆಯೋಜಿಸಿದ್ದ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಯುವಜನತೆ ಸಮಾಜಮುಖಿಯಾದಾಗ ಮಾತ್ರ ಜೀವನವು ಸಾರ್ಥಕವಾಗುವುದು. ತಮ್ಮ ವಿದ್ಯಾರ್ಥಿದೆಸೆಯಲ್ಲಿಯೇ ಸಾಮಾಜಿಕ ಹೊಣೆಗಾರಿಕೆಯನ್ನರಿತು ಮುನ್ನಡೆದಾಗ ಮಾತ್ರ ದೇಶದ ಅಭಿವೃದ್ಧಿಗೆ ವೇಗದೊರಕುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಡಿ.ಮಂಚಿ ಹೇಳಿದರು. ಎನ್.ಎಸ್.ಎಸ್.ಘಟಕ ನಾಯಕರಾದ ಕು.ಪ್ರಾಜ್ಞವಿ ಹಾಗೂ ಅಲ್ವಿನ್ ಡಿಸೋಜಾ ಉಪಸ್ಥಿತರಿದ್ದರು.
ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತ್ರೀ ಹೆಚ್.ವಿ. ಸ್ವಾಗತಿಸಿದರು. ಪ್ರಾಧ್ಯಾಪಕಿ ಕು.ಕಾವ್ಯಾ ವಂದಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಕು.ನಿರೀಕ್ಷಾ ನಿರೂಪಿಸಿದರು, ವಿದ್ಯಾರ್ಥಿನಿಯರಾದ ನಿಧಿ ಮತ್ತು ತಂಡ ಪ್ರಾರ್ಥಿಸಿದರು.
