ಬಂಟ್ವಾಳ: ಶಿಕ್ಷಣದಿಂದ ಮಾತ್ರ ಉತ್ತಮ ಪ್ರಜೆಗಳ ನಿರ್ಮಾಣವಾಗಿ ಸಂಸ್ಕೃತಿ ಉಳಿಯಲು ಸಾಧ್ಯ, ಶಿಕ್ಷಕವೃತ್ತಿ ಅತ್ಯಂತ ಶ್ರೇಷ್ಠವಾದುದು ಎಂದು ಬಂಟ್ವಾಳ ಎಸ್.ವಿ.ಎಸ್.ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ ಹೇಳಿದ್ದಾರೆ

ಮಾಣಿ ಪದ್ಮಅಡಿಟೋರಿಯಂನಲ್ಲಿ ಯಶಸ್ ವಿದ್ಯಾಲಯ ಬಂಟ್ವಾಳ ಮತ್ತು ಮಾಣಿ ನರ್ಸರಿ ಶಿಕ್ಷಕಿಯರ ತರಬೇತಿ ಪಡೆದ ನರ್ಸರಿ ಶಿಕ್ಷಕಿಯರ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೌರವ ಅತಿಥಿಯಾಗಿದ್ದ ನಿವೃತ್ತ ಉಪನ್ಯಾಸಕ ಜಯಾನಂದ ಪೆರಾಜೆ ಅವರು ಮಾತನಾಡಿ,
ಆತ್ಮವಿಶ್ವಾಸ,ಪರಿಶ್ರಮ,ದೃಢನಂಬಿಕೆ

ಬಂಟ್ವಾಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿನಯ ಕುಮಾರಿ ಮುಖ್ಯ ಅತಿಥಿಯಾಗಿದ್ದರು. ಲ| ಡಾ.ಶ್ರೀನಾಥ ಆಳ್ವ ಪೆರಾಜೆ,ಕರ್ನಾಟಕ ಆರ್ಗೇನಿಕ್ ಫೌಂಡೇಶನ್ ಆಡಳಿತಾಧಿಕಾರಿ ಮೋಹನ ಗೌಡ ಕಲ್ಮಂಜ,ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿನ್ಸೆಂಟ್ ಲಸ್ರಾದೊ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿ ಮಾತನಾಡಿದರು.
ಅನಂತಾಡಿ ಗ್ರಾ. ಪಂ.ಅಧ್ಯಕ್ಷೆ ಸುಜಾತ ಸುರೇಶ್ ಪೂಜಾರಿ ನಿವೃತ್ತಶಿಕ್ಷಕಿ ಸುಂದರಿ ಅನಂತಾಡಿ,ಲಯನ್ಸ್ ಕ್ಲಬ್ಬಿನ ಕಾರ್ಯದರ್ಶಿ ಅನಿಲ್ ಕುಮಾರ್ , ನಿರ್ದೇಶಕ ಸಚ್ಚಿದಾನಂದ ರೈ ಪಾಳ್ಯ, ಕೋಶಾಧಿಕಾರಿ ರೊನಾಲ್ಡ್ ಮೊನೀಸ್ ಉಪಸ್ಥಿತರಿದ್ದರು.
ಯಶಸ್ ವಿದ್ಯಾಲಯ ಬಂಟ್ವಾಳದ ಪ್ರಾಂಶುಪಾಲ ಪುಷ್ಪರಾಜ ಕೆ. ಅನಂತಾಡಿ ಪ್ರಸ್ತಾವನೆಗೈದು, ಸ್ವಾಗತಿಸಿದರು.ಎಸ್ಇಜಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಶ್ರೀಕಾಂತ್ ಕೆ.ವಂದಿಸಿದರು.ಸಂಸ್ಥೆಯ ಆಡಳಿತಾಧಿಕಾರಿ ಮೀನಾಕ್ಷಿ ದೇವಾಡಿಗ ಸಹಕರಿಸಿ,ಶಿಕ್ಷಕಿ ಪ್ರಿಯತಾ ನಿರೂಪಿಸಿದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.
