ಬಂಟ್ವಾಳ: ಏರ್ಯ ಆಳ್ವ ಫೌಂಡೇಶನ್ ಹಾಗೂ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ವಿದ್ಯಾರ್ಥಿಗಳ ಸಾಹಿತ್ಯ, ಸಾಂಸ್ಕೃತಿಕ ಕಮ್ಮಟ ಏರ್ಯ ಬೀಡುವಿನಲ್ಲಿ ನಡೆಯಿತು.
ಆನಂದಿ ಎಲ್ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು.ಮಹಾಬಲೇಶ್ವರ ಹೆಬ್ಬಾರ್ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿ, ಅರವಿಂದ ಕುಡ್ಲ ಒರಿಗಾಮಿ, ಗೋಪಾಲಕೃಷ್ಣ ನೇರಳಕಟ್ಟೆ ಸೃಜನ ಶೀಲ ಸಾಹಿತ್ಯ ದ ಕಾರ್ಯಾಗಾರ ನಡೆಸಿಕೊಟ್ಟರು.

ಏರ್ಯ ಬಾಲಕೃಷ್ಣ ಹೆಗ್ಡೆ, ಬಂಟ್ವಾಳ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ದ ಅಧ್ಯಕ್ಷರಾದ ಡಾ ತುಕಾರಾಮ ಪೂಜಾರಿ, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ವಿಶ್ವನಾಥ ಬಂಟ್ವಾಳ, ರತ್ನಾಕರ ಶೆಟ್ಟಿ ಮುಂಡಡ್ಕ ಗುತ್ತು, ಅಮ್ಟಾಡು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ವಿಜಯ ಕುಮಾರ್, ಮಕ್ಕಳ ಕಲಾ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಶ್ರೀಕಲಾ ಕಾರಂತ್, ಸ್ಕಿಲ್ ಕೋರ್ಸ್ ನ ಶಿಕ್ಷಕರಾದ ಅಭಿನಂದನ್ ಉಪಸ್ಥಿತರಿದ್ದರು.
ಕೇಶವ ಎಚ್ ಕಟೀಲು ಏರ್ಯ ರ ನೆನಪುಗೈದರು, ಶಿಕ್ಷಕ ಜಗನ್ನಾಥ್ ಸ್ವಾಗತಿಸಿ, ಯೋಗೀಶ್ ಎಚ್ ವಂದಿಸಿದರು.ಕಾರ್ಯಕ್ರಮದ ಸಂಯೋಜಕ ದಾಮೋದರ್ ಮಾಸ್ಟರ್ ಏರ್ಯ ನಿರೂಪಿಸಿದರು.
ವಿದ್ಯಾರ್ಥಿಗಳಿಗೆ ಶ್ರೀಕಲಾ ಕಾರಂತ್ ಅವರು ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಪ್ರಾಥಮಿಕ ವಿಭಾಗ:
ದೀಪ್ತಾ ಶೆಟ್ಟಿ, ಸ್ಯಾಮ್ ನೋರ್ಬರ್ಟ್ ಲೋಬೊ,
ಮದ್ವಿಕ್,ಸೋಹಮ್, ಹಂಸಿಕಾ ಪಿ ಶೆಟ್ಟಿ.
ಪ್ರೌಢಶಾಲಾ ವಿಭಾಗ:
ದೃತಿ, ಶರಣ್ಯ, ಲಿಖಿತ, ಶೀರ್ಷಿಕಾ ಕಾರಂತ್,
ಕಾಲೇಜು ವಿಭಾಗ:
ದಿಶಾ, ಹೇಮಲತಾ, ತುಳಸಿ, ಗೌತಮಿ, ಧನ್ವಿತಾ ಕಾರಂತ್ ಬಹುಮಾನ ಪಡಕೊಂಡರು.
