ಬಂಟ್ವಾಳ : ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಸೀಡಿಂಗ್ ಮತ್ತು ಇ – ಕೆವೈಸಿ ಯನ್ನು ಸೆ.30 ರ ಒಳಗಾಗಿ ಕಡ್ಡಾಯವಾಗಿ ಮಾಡುವಂತೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ  ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರಾದ ಜಯಂತಿ ವಿ.ಪೂಜಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ  ಇ – ಕೆವೈಸಿ ದೃಢಿಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 45,480, ಇ – ಕೆವೈಸಿ ದೃಡೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿ ಫಲಾನುಭವಿಗಳ ಸಂಖ್ಯೆ 141923 ಇದ್ದು,ಅರ್ಹ ಫಲಾನುಭವಿಗಳ ಪಡಿತರ ಚೀಟಿ ರದ್ದಗಾದಂತೆ ಪಡಿತರ ಅಂಗಡಿದಾರರು ಜವಾಬ್ದಾರಿ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.
ಗೃಹ ಜ್ಯೋತಿ:
ಗೃಹ ಜ್ಯೋತಿ ಮರುಪರಿಶೀಲನೆಗೆ ಬಾಕಿ ಉಳಿದವರು ತಮ್ಮ ದಾಖಲೆಗಳನ್ನು  ಆಗಸ್ಟ್ 30 ರ ಒಳಗಾಗಿ ನಿಮ್ಮ ಹತ್ತಿರದ ಮಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ಒದಗಿಸಿ ಗೃಹಜ್ಯೋತಿಯ  ಪ್ರಯೋಜನವನ್ನು ಪಡೆದುಕೊಳ್ಳುವಂತೆಯು ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.  ಭಾರತ್ ಜೋಡೋ ಸದಸ್ಯರಾಗಿ :
ರಾಹುಲ್ ಗಾಂಧಿ ಅವರ ಯುವ ದೃಷ್ಟಿಕೋನ ಹಾಗೂ  ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ಸಂಘಟನಾ ಶಕ್ತಿಯೊಂದಿಗೆ ಯುವಕ-ಯುವತಿಯರನ್ನು ಒಗ್ಗೂಡಿಸುವ ಭಾರತ್ ಜೋಡೋ ಸಂಘಟನೆ ಅಭಿಯಾನಕ್ಕೆ ಬಂಟ್ವಾಳ ತಾಲೂಕಿನ 16 ರಿಂದ 35 ವರುಷದ ಯುವಕ,ಯುವತಿಯರು ಸದಸ್ಯತ್ವ ಪಡೆಯಲು ನೊಂದಾವಣಿ ಮಾಡಿಕೊಂಡು ಗ್ರಾಮದ ಅಭಿವೃದ್ಧಿ ಹಾಗೂ ಸೇವೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬೇಕಾಗಿಯು ಜಯಂತಿ ಪೂಜಾರಿ ಅವರು ಈ ಮೂಲಕ ಕೋರಿದ್ದಾರೆ. 

By Suddi9

Leave a Reply

Your email address will not be published. Required fields are marked *