ಬಂಟ್ವಾಳ: ಜೈಭೀಮ್ ಬ್ರದರ್ಸ್ ವಗ್ಗ ಹಾಗೂ ಅಲೇರಿ ಶ್ರೀ ಸತ್ಯಸಾರಮಾನಿ ಕಾನದ ಕಟದ ಮೂಲ ಕ್ಷೇತ್ರ (ರಿ.) ಗ್ರಾಮ ಸಮಿತಿ ವಗ್ಗ ವಲಯ ಇದರ ಅಶ್ರಯದಲ್ಲಿ “ಕೆಸರ್ದ ಕಂಡೊಡು ಗೊಬ್ಬುದ ಗಮ್ಮತ್” ಕಾರ್ಯಕ್ರಮವು ವಗ್ಗ ಅಜ್ಜಿಬಾಕಿಮಾರು ಗದ್ದೆಯಲ್ಲಿ ಭಾನುವಾರ ನಡೆಯಿತು
ಕರ್ನಾಟಕ ಬಹುಜನ ಸಮಾಜ ಪಾರ್ಟಿಯಕಾಂತಪ್ಪ ಅಲಂಗಾರ್ ಅವರು ಸತ್ಯಸಾರಮಾನಿ ಕಾನದ ಕಟದ ದೈವ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪರ್ಚನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ಶ್ರೀ ಕಾನದ ಕಟದ ದೈವಗಳ ಬದುಕಿನ ಚರಿತ್ರೆ,ಕಲೆ, ಶಕ್ತಿ, ಕೃಷಿ ಪ್ರಾತಿನಿದ್ಯತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರವರ ಆಲೋಚನೆ ಜ್ಞಾನ ಪ್ರತಿಯೊಬ್ಬರಲ್ಲಿಯೂ ಬೆಳೆಯಬೇಕು ಎಂದರು.

ಜೈಭೀಮ್ ಬ್ರದರ್ಸ್ ನ ಅಧ್ಯಕ್ಷರಾದ ವಸಂತ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಅತಿಥಿಯಾಗಿ ಭಾಗವಹಿಸಿದ್ದದ.ಕ. ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕಾದ್ಯಕ್ಷರಾದ ಸೇಸಪ್ಪ ಬೆದ್ರಕಾಡು ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ಚಿಂತನೆ ಹೋರಾಟದ ಹಾದಿಯಲ್ಲಿ ಸಂಘಟನೆಯನ್ನು ಕಟ್ಟಬೇಕು ಎಂದರು.
ಇನ್ನೊರ್ವ ಅತಿಥಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ ಅವರು ಮಾತನಾಡಿ, ಸಮಜದಲ್ಲಿ ಅಸ್ಪೃಶ್ಯತೆ,ಅಸಮಾನತೆ ಹೋಗಲಾಡಿಸಿ ಸಮ ಸಮಾಜದ ನಿರ್ಮಾಣ ಹಾಗೂ ಸಾಮಾಜಿಕ ಬದುಕು ಕ್ರೀಡಾತ್ಮಕವಾಗಿಯೂ ಒಗ್ಗಟ್ಟನ್ನು ಕಟ್ಟಲು ಸಾಧ್ಯ ಎಂದರು.
ಉದ್ಯಮಿ ಪಿಯೂಸ್ ಎಲ್. ರೋಡ್ರಿಗಸ್,ಸಮುದಾಯದ ಪ್ರಮುಖರಾದ ಶೇಖರ್ ಕುಕ್ಕೇಡಿ, ಗಣೇಶ್ ಪ್ರಸಾದ್ ಮೂಡಬಿದ್ರೆ,ಕೃಷ್ಣಪ್ಪ ಜಾವಳಿ, ಮೋಹನ್ ಚೆಂಡ್ತಿಮಾರ್,ಶ್ರೀನಿವಾಸ್ ಅರ್ಬಿಗುಡ್ಡೆ,ಅಣ್ಣು ಖಂಡಿಗ, ಜಿನಮ್ಮ ಅತ್ತಿಕಾರಬೈಲು ,ವೀರೇಂದ್ರ ಅಮೀನ್ ವಗ್ಗ,ರಾಜಾ ಚೆಂಡ್ತಿಮಾರ್, ಮಂಜುನಾಥ್ ಮಾಡ, ಮಾಧವ ಕಡೇಶಿವಾಲಯ ತ್ರಿವಳಿ, ಚಂದ್ರಪ್ಪ ಮಾಸ್ಟರ್, ರಾಜೀವ್ ಕಕ್ಕೆಪದವು, ಪ್ರವೀಣ್ ಸೂರ್ಯ ಹೊಸಂಗಡಿ, ಸುರೇಶ್ ಪೂಜಾರಿ ಹರೀಶ್ ಪಂಡಿಜೆ, ಸೋಮಪ್ಪ ಅಲಂಗಾರ್, ರಜನಿ ಬಾಬು,ಲೋಕಯ್ಯ ಗಾಡಿಪಲ್ಕೆ, ವೆಂಕಟೇಶ್ ಕೃಷ್ಣಪುರ, ಪ್ರೀತಮ್ ರಾಜ್ ಪಲ್ಲೆಮಜಲು ,ರಾಮ ಚೆಂಡ್ತಿಮಾರ್, ಮೋಹನ್ ಬಾಳಿಕೆ ಮೊದಲಾದವರು ಭಾಗವಹಿಸಿದ್ದರು.
ಜೈಭೀಮ್ ಬ್ರದರ್ಸ್ ನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ಬುದ್ಧ ಗೀತೆಯನ್ನು ಹಾಡಿದರು. ಕಾರ್ತಿಕ್ ವಗ್ಗ ಸ್ವಾಗತಿಸಿದರು
ಬಳಿಕ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭ ಕ ಅಧ್ಯಕ್ಷತೆಯನ್ನು ಮಾಜಿ ಸಚಿವರಾದ ಬಿ ರಮಾನಾಥ ರೈ ಯವರು ವಹಿಸಿದ್ದರು. ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿಕುಂದರ್ ಅವರು ಅತಿಥಿಯಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿಕರಾಟೆ ಸಾಧಕಿ ತೃಷ, ಸ್ಥಳವಕಾಶ ನೀಡಿದ ಕೂಸಪ್ಪ ಪೂಜಾರಿ, ನಿರೂಪಕರಾದ ಚಂದ್ರಪ್ಪ ಮಾಸ್ಟರ್ ಮದ್ದಡ್ಕ, ಅಲೇರಿ ಶ್ರೀ ಸತ್ಯಸಾರಮನಿ ವಗ್ಗ ವಲಯ ಗೌರವಾಧ್ಯಕ್ಷರಾದ ಬಿಪಿನ್ ರಾಜಪಲ್ಕೆ ಸಹಿತ ಸಾಧಕರನ್ನು ಸನ್ಮಾನಿಸಲಾಯಿತಲ್ಲದೆ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಚಂದ್ರಹಾಸ್ ಅರ್ಬಿಗುಡ್ಡೆ ವಂದಿಸಿದರು.
