ಬಂಟ್ವಾಳ: ತಾಲೂಕಿನ ಕೊಯಿಲ ಸಮೀಪದ ಹೋರಂಗಳ ಬಳಿ ಶನಿವಾರ ರಾತ್ರಿ ಆಕಸ್ಮಿಕ ಕಾಲು ಜಾರಿ ತೋಡಿಗೆ ಬಿದ್ದು ನಾಪತ್ತೆಯಾಗಿದ್ದ ಜೀವನ್ ಪಿಂಟೋ(48)ಅವರ ಮೃತ ದೇಹ ಸೋಮವಾರ ಬೆಳಿಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪದ ನೀರಿನಲ್ಲಿ ಪತ್ತೆ ಹಚ್ಚಿ ಮೇಲಕ್ಕೆತಗತವಲ್ಲಿ ಎನ್ ಡಿ ಆರ್ ಎಫ್ ತಂಡ ಯಶಸ್ವಿಯಾಗಿದೆ.

ಶನಿವಾರ ರಾತ್ರಿ ತೋಡಿ ಇನ್ನೊಂದು ಬದಿಯಲ್ಲಿರುವ  ತಮ್ಮ ಮಾವನ ಮನೆಗೆ ತೆರಳಲೆಂದು ಕಾಲು ಸಂಕದಲ್ಲಿ ದಾಟುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿರಬಹುದೆಂದು ಶಂಕಿಸಲಾಗಿತ್ತು.ವಿಪರೀತ ಮಳೆ ಸಹಿತ ತೋಡಿನಲ್ಲಿ‌ನೀರಿನ ಹರಿವಿನ ಮಧ್ಯೆಯು ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳೀಯ ಸಹಕಾರದಿಂದ ಹುಡುಕಾಟ ನಡೆಸಿದ್ದರು.ಭಾನುವಾರ ಇಡೀದಿನ ಎನ್ ಡಿಆರ್ ಎಫ್ ತಂಡವು ಜೊತೆಗೂಡಿ‌ಶೋಧ ನಡೆಸಿತ್ತು.ಸೋಮವಾರ ಬೆಳಿಗ್ಗೆ ಅರಳ ಗ್ರಾಮದ ಪಂಬದಗದ್ದೆ ಸಮೀಪದ ನೀರಿನಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮುಂದಿನ ಪ್ರಕ್ರಿಯೆ ನಡೆಸಿದ  ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲೊಸಿಕೊಂಡಿದ್ದಾರೆ.  

By Suddi9

Leave a Reply

Your email address will not be published. Required fields are marked *