ಕೈಕಂಬ: ಎಸ್. ಡಿ. ಎಮ್. ಮಂಗಳಜ್ಯೋತಿ ಕೈಗಾರಿಕಾ ತರಬೇತಿ ಸಂಸ್ಥೆ, ವಾಮಂಜೂರು ವತಿಯಿಂದ “ಶೈಕ್ಷಣಿಕ ವರ್ಷದ ಉದ್ಘಾಟನಾ ಸಮಾರಂಭ – 2026” ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಅಳವಡಿಸಿದರೆ ಮುಂದಿನ ಜೀವನದ ಪಯಣದಲ್ಲಿ ತಾವೂ ಜಯಶಾಲಿಗಳಾಗುವಿರಿ. ಹಾಗೂ Skill (ಕೌಶಲ್ಯ) ಜೊತೆಗೆ Will (ಕಾರ್ಯಗತ) ಕೂಡ ರೂಢಿಸಿಕೊಳ್ಳುವುದು ಉತ್ತಮ ಎಂದು ತಿಳಿಹೇಳಿ ಸಮಾರಂಭ ಉದ್ಘಾಟಿಸಿದ ಸಾಯಿ ರಾಧ ಮೋಟರ್ಸ್‌ ಎಚ್‌ಓಡಿ  ಪ್ರೀತೇಶ್ ಕುಮಾರ್  ಮಂಗಳೂರು  ಉದ್ಘಾಟನಾ ಭಾಷಣದಲ್ಲಿ ವಿದ್ಯಾರ್ಥಿಗಳ ಯಶಸ್ಸಿಗಾಗಿ ಹಾರೈಸಿದರು


ಕಠಿಣ ಪರಿಶ್ರಮದ ತಾಂತ್ರಿಕ ಕಲಿಕೆಯು ವಿದ್ಯಾರ್ಥಿಗಳಿಗೆ ತರಬೇತಿ ಹಾಗೂ ಉದ್ಯೋಗದ ಸಮಯದಲ್ಲಿ ಸಹಕಾರಿಯಾಗುತ್ತದೆ ಎಂದು ತಿಳಿಸಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀಯುತ ವೀರಣ್ಣ ಗೌಡ K M – EV Technical Support Engineer, TVS Motors Company ಇವರು ತಮ್ಮ ಭಾಷಣದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ಡಾ. ಎ. ರಾಜೇಂದ್ರ ಶೆಟ್ಟಿ, ಕಾರ್ಯದರ್ಶಿಗಳು, ಅಂಗವಿಕಲರ ಕಲ್ಯಾಣ ಸಂಸ್ಥೆ (ರಿ), ಮಂಗಳೂರು ಇವರು ವಹಿಸಿದರು.
ಈ ಕಾರ್ಯಕ್ರಮಕ್ಕೆ ಮಂಗಳಜ್ಯೋತಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಯುತ ನರೇಶ ಮಲ್ಲಿಗೆಮಾಡು  ಮಂಗಳಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಹರಿಣಾಕ್ಷಿ  ಇವರು ಉಪಸ್ಥಿತರಿದ್ದರು.
ಸ್ವಾಗತ ಭಾಷಣವನ್ನು ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಯುತ ನರೇಂದ್ರ ಇವರು ನೆರವೇರಿಸಿದರು. ನೀತಿ ನಿಯಮಗಳನ್ನು ಶ್ರೀಮತಿ ಪ್ರಫುಲ್ಲ , ತರಬೇತಿ ಅಧಿಕಾರಿ ಇವರು ನೆರವೇರಿಸಿದರು.
ಕಾರ್ಯಕ್ರಮವನ್ನು ಶ್ರೀಮತಿ ಸುರೇಖ  ನಿರೂಪಿಸಿದರು. ಹಾಗೂ ಶ್ರೀಯುತ ಗಿರೀಶ್ ಧನ್ಯವಾದಾರ್ಪಣೆಗೈದರು.
ಸಂಸ್ಥೆಯ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *