ಬಂಟ್ವಾಳ : ರಾಜ್ಯದಲ್ಲಿ ಸುಮಾರು 35ಲಕ್ಷ ಮಂದಿ ಗಾಣಿಗ ಸಮುದಾಯವಿದ್ದರೂ ವಿವಿಧ ಪಂಗಡಗಳ ಹೆಸರಿನಲ್ಲಿ ಸಂಘಟಿತರಾಗದ ಪರಿಣಾಮ ಶೈಕ್ಷಣಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿಯುವಂತಾಗಿದೆ. ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಗಾಣಿಗ ಅಭಿವೃದ್ಧಿ ನಿಗಮ ರಚಿಸಲಾಗಿದ್ದು, ಇದಕ್ಕೆ ಸರ್ಕಾರ  ರೂ 500 ಕೋಟಿ ಮೊತ್ತದ ಅನುದಾನ ಒದಗಿಸಿದಾಗ ಗಾಣಿಗ ಸಮುದಾಯದ ಶೈಕ್ಷಣಿಕ ಚಟುವಟಿಕೆ ಮತ್ತು ಸ್ವ ಉದ್ಯಮ ಪ್ರೋತ್ಸಾಹಿಸಲು ಸಾಧ್ಯವಾಗುತ್ತದೆ ಎಂದು ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾಜಿ ಮೇಯರ್ ಅನಂತ್ ಮೈಸೂರು ಹೇಳಿದ್ದಾರೆ.

ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಸಭಾಂಗಣದಲ್ಲಿ ಗಾಣಿಗರ ಸೇವಾ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಅರ್ಹ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಹಾಗೂ ನವೀಕೃತ ಸುಮಂಗಲಾ ಕಲ್ಯಾಣ ಮಂಟಪ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಂಬೈ ಗಾಣಿಗ ಸಂಘದ ಅಧ್ಯಕ್ಷ ಶ್ರೀನಿವಾಸ್ ಪಿ.ಸಪಲ್ಯ ಅವರು ನವೀಕೃತ ಸುಮಂಗಲಾ ಕ್ಲಯಾಣ ಮಂಟಪ ಲೋಕಾರ್ಪಣೆಗೊಳಿಸಿ ಮಾತನಾಡಿ, ‘ಸಮುದಾಯ ರಾಜಕೀಯ ಅಭಿಪ್ರಾಯ ಭೇದಗಳನ್ನು ಬದಿಗಿಟ್ಟು ಸಂಘಟಿತರಾದಾಗ ಮಾತ್ರ ಬಲಿಷ್ಟವಾಗಿ ರೂಪುಗೊಳ್ಳಲು ಸಾಧ್ಯವಿದೆ’ ಎಂದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ‘ಸ್ಮರಣ ಸಂಚಿಕೆ’ ಬಿಡುಗಡೆಗೊಳಿಸಿ ಮಾತನಾಡಿ, ‘ ಒಂದು ಸಮಾಜ ಇತಿಹಾಸ ನಿರ್ಮಿಸಲು ಇತಿಹಾಸ ಅರಿತಿರಬೇಕು. ಅದೇ ರೀತಿ ಗಾಣಿಗ ಸಮುದಾಯ ಶಿಕ್ಷಣ ಸಂಸ್ಥೆ ತೆರೆಯಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.
ಇದೇ ವೇಳೆ ನಾದಸ್ವರ ವಾದಕರಾದ ಧನಂಜಯ ಶೇರಿಗಾರ್ ಶಿಬರೂರು ಮತ್ತು ಮನೋಜ್ ಗಾಣಿಗ ಕಟೀಲು ಇವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳು ಮತ್ತು ಕೊಂಬು ವಾದಕರನ್ನು ಅಭಿನಂದಿಸಲಾಯಿತು.
ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ‘ಗಾಣಿಗ ಸಮಾಜವು ದೇಶಕ್ಕೆ ವಿಶ್ವಮನ್ನಣೆಯ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಡುಗೆ ನೀಡಿದೆ’ ಎಂದರು.
ಅಖಿಲ ಕನರ್ಾಟಕ ಗಾಣಿಗ ಸಂಘದ ಅಧ್ಯಕ್ಷ ರಾಜಶೇಖರ್ ಗಾಣಿಗ, ಜಿಲ್ಲಾ ಸಂಘದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಎಸ್. ಮಾವೆ, ಉದ್ಯಮಿಗಳಾದ ವಸಂತ ಜಿ.ಸಪಲ್ಯ ಕುಂಜಾರು, ಜನಾರ್ದನ ಅಕರ್ುಳ ಶುಭ ಹಾರೈಸಿದರು. ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ಪ್ರಮುಖರಾದ ಕೇಶವ ಅತ್ತಾವರ, ವೆಂಕಟೇಶ್ ಅತ್ತಾವರ, ಸಚಿನ್ ಮೆಲ್ಕಾರ್, ಸಂಘದ ಪದಾಧಿಕಾರಿಗಳಾದ ನರ್ಸಪ್ಪ ಅಮೀನ್, ವೇದವ ಗಾಣಿಗ, ಭುವನೇಶ್ ಮೊಗನರ್ಾಡು, ಆಶಾ ವೇದವ ಗಾಣಿಗ ಮತ್ತಿತರರು ಇದ್ದರು.
ಸಂಘದ ಕಾರ್ಯದಶರ್ಿ ಬಾಲಕೃಷ್ಣ ಸೆರ್ಕಳ ಸ್ವಾಗತಿಸಿ, ವಸಂತ ವಂದಿಸಿದರು. ದೀಪಕ್ ಅಡ್ಯಾರು ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮ ಬಳಿಕ ನರಿಕೊಂಬು ಅಬ್ಬೆಯಮಜಲು ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾ ಕೇಂದ್ರದ ಬಾಲ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಂಡಿತು.

By Suddi9

Leave a Reply

Your email address will not be published. Required fields are marked *