ಬಂಟ್ವಾಳ:ರೋಟರಿ ಕ್ಲಬ್ ಬಂಟ್ವಾಳ ಆಶ್ರಯದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಭದ್ರಾ ಗ್ಯಾಸ್ ಏಜನ್ಸಿ ಬಂಟ್ವಾಳ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನ ಆಯ್ದ ಅರ್ಹ 58 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣಾ ಸಮಾರಂಭ ರೋಟರಿ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಅತಿಥಿಯಾಗಿದ್ದರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್  ಮಾತನಾಡಿ, ಹಿರಿಯರು, ಶಿಕ್ಷಕರು, ಸೈನಿಕರನ್ನು ಗೌರವಿಸಿ. ಸಮಾಜಕ್ಕೆ ಒಳಿತನ್ನು ಮಾಡಿ, ಮುಂಬರುವ ದಿನಗಳಲ್ಲಿ ತಾವು ಪಡೆದುದಕ್ಕಿಂತ ಹತ್ತು ಪಟ್ಟು ಹೆಚ್ಚು ಮೊತ್ತವನ್ನು ಸಮಾಜಕ್ಕೆ ನೀಡುವಂತಾಗಲಿ ಎಂದು ಆಶಿಸಿದರು.
ಬಂಟ್ಚಾಳ ರೋಟರಿ ಕ್ಲಬ್ ಅಧ್ಯಕ್ಷ ರವಿಚಂದ್ರ ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸೇವ್ ಲೈಫ್‌ ಚಾರಿಟೇಬಲ್‌ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕಾ‌ರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಕಂಫರ್ಟ್ ನ್ ನಿಂದ ಹೊರಬರಲು ಪ್ರಯತ್ನಿಸಬೇಕು. ಪಾಸಿಟಿವ್ ವಿಚಾರಗಳನ್ನು ಹೊಂದಿರಬೇಕು. ಜೀವನದ ಪ್ರತಿ ಕ್ಷಣವನ್ನು ಅಧ್ಯಯನಕ್ಕೆ ಮೀಸಲಾಗಿಡಬೇಕು ಎಂದರು.
ಭದ್ರಾ ಗ್ಯಾಸ್ ಏಜನ್ಸಿ ಮಾಲೀಕ ಹಾಗೂ ರೋಟರಿ ಕ್ಲಬ್‌ ಪೂರ್ವಾಧ್ಯಕ್ಷ ಮಂಜುನಾಥ ಆಚಾರ್ಯ ಕಾರ್ಯಕ್ರಮ ಕುರಿತು ಮಾಹಿತಿ ನೀಡಿ, ಭದ್ರಾ ಗ್ಯಾಸ್ ಏಜನ್ಸಿಯ 40ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಇಂಟರ್ಯಾಕ್ಟ್ ಶಾಲೆಗಳ ಮೂಲಕ ವಿದ್ಯಾರ್ಥಿಗಳು ಆಯ್ಕೆ ಆಗಿದ್ದು, ಒಟ್ಟು 5 ಲಕ್ಷ ರೂ ಮೊತ್ತವನ್ನು ಒದಗಿಸಲಾಗಿದೆ ಎಂದರು.
ರೋಟರಿ ಸದಸ್ಯರಾದ ಮಧ್ವ ಆಚಾರ್ಯ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕೃಷ್ಣ ನಾಯಕ್ ಅತಿಥಿಗಳನ್ನು ಪರಿಚಯಿಸಿದರು. ಸೇವ್ ಲೈಫ್‌ ಚಾರಿಟೇಬಲ್ ಟ್ರಸ್ಟ್ ನ ಭಾಗ್ಯಶ್ರೀ ಭಂಡಾರ್ಕರ್, ರೋಟರಿ ಬಂಟ್ವಾಳ ಕಾರ್ಯದರ್ಶಿ ರವಿರಾಜ ಶೆಟ್ಟಿ ಉಪಸ್ಥಿತರಿದ್ದರು. ಕೋಶಾಧಿಕಾರಿ ಐತಪ್ಪ ಪೂಜಾರಿ ವಂದಿಸಿದರು. ಸದಸ್ಯ ಅಹಮದ್‌ ಮುಸ್ತಫಾ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *