ಬಂಟ್ವಾಳ : ಫರಂಗೀಪೇಟೆಯ ಒಳರಸ್ತೆಯಲ್ಲಿರುವ ಮೆನೇಜಸ್ ಪ್ಲಾಜಾ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುವ ಕೆನರಾ ಬ್ಯಾಂಕ್ ಫರಂಗಿಪೇಟೆ ಶಾಖೆಯಲ್ಲಿ ಜು.13 ರಂದು ಕಳವಿಗೆ ವಿಫಲ ಯತ್ನ ನಡೆಸಿದ ಪ್ರಕರಣದ ಆರೋಪಿಯ ಹೆಡೆಮುರಿಕಟ್ಟುವಲ್ಲಿ ಬಂಟ್ವಾಳ ಯಶಸ್ವಿಯಾಗಿದ್ದಾರೆ.

ಸಂಬಂಧಿಸಿದಂತೆ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಂಟ್ವಾಳ ತಾಲೂಕಿನ ಪುದು ಗ್ರಾಮದ ಮಾರಿಪಳ್ಳದ ಸುಜೀರು ಬದಿಗುಡ್ಡೆ ನಿವಾಸಿ ಮೊಹಮ್ಮದ್ ಶಾಖಿರ್ (33) ಬಂಧಿತ ಆರೋಪಿಯಾಗಿದ್ದಾನೆ.
ಬುಧವಾರ ಸಂಜೆ ಬಿ.ಸಿ.ರೋಡಿಗೆ ಸಮೀಪದ ತಲಪಾಡಿಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಬಂದಿಸಿದ್ದು,ಗುರುವಾರ ಆರೋಪಿಯನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು,ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ನಿವೇದನೆಯಂತೆ ಈತನನ್ನು 6 ದಿನಗಳ ಕಾಲ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈತ ಒರ್ವನೇ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ ಎಂಬ ಅಂಶ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿಬಯಲಿಗೆ ಬಂದಿದ್ದು,ಕೃತ್ಯ ನಡೆಸುವ ಮೊದಲದಿನವು ಈತ ಬ್ಯಾಂಕಿನ ಅವರಣಕ್ಕಾಗಮಿಸಿ ಎಲ್ಲವನ್ನು ಪರಿಶೀಲಿಸಿ ಬಳಿಕ ಈ ಕೃತ್ಯ ಎಸಗಿದ್ದಾನೆಂದುತಿಳಿದುಬಂದಿದೆ.
ಇದೇ ಮೊದಲಬಾರಿಗೆ ಈ ಘೋರ ಕೃತ್ಯದಲ್ಲಿ ಭಾಗಿಯಾಗಿದ್ದು,ಯುಟ್ಯೂಬ್ ಮೂಲಕ ಕಳವಿನ ಬಗ್ಗೆ ಎಲ್ಲವನ್ನು ಗಮನಿಸಿ ಕೊಂಡು ಬಳಿಕ ಈ ಕೃತ್ಯವನ್ನು ನಡೆಸಲು ಮುಂದಾಗಿದ್ದಾನೆಂದು ಎಂದು ಗೊತ್ತಾಗಿದೆ
ಕಟ್ಟಡದ ಮೊದಲ ಮಹಡಿಯಲ್ಲಿ ಈತ ರಂದ್ರ ಕೊರೆದು ಬ್ಯಾಂಕಿನ ಒಳಪ್ರವೇಶಿಸಿ ಲಾಕರ್ ನ ಮೇಲ್ಭಾಗದ ಒಂದು ತಗಡು ಶೀಟ್ ಕಟ್ಟರ್ ಮೂಲಕ ಕತ್ತರಿಸಿದ್ದು,ಅದರ ಒಳಭಾಗವನ್ನು ಕತ್ತರಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ನಗದು,ಚಿನ್ನಾಭರಣವನ್ನು ದೋಚಲಾಗದೆ ಬರಿಗೈಯಲ್ಲಿ ವಾಪಾಸ್ ಆಗಿದ್ದ. ಈ ಘಟನೆ ಸ್ಥಳೀಯವಾಗಿ ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು.ತನಿಖೆ ಮುಂದುವರಿದಿದೆ.
