ಬಂಟ್ವಾಳ: ಸಜೀಪ ಮೂಡ ಗ್ರಾಮದ ಸುಭಾಷ್ ನಗರ ಶ್ರೀ ಶಾರದಾ ಪೂಜಾ ಸಮಿತಿ ಮತ್ತು ಸುಭಾಷ್ ಯುವಕಮಂಡಲ ಸಜೀಪಮೂಡ ಇದರ ಆಶ್ರಯದಲ್ಲಿ ನಡೆಯುವ ಶಾರದಾ ಪೂಜೆ ಮಹೋತ್ಸವ ಶತಮಾನೋತ್ಸವದ ಅಚರಣೆಯ ಸಂಭ್ರಮದ ಹಿನ್ನಲೆಯಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.
ಅಕ್ಟೋಬರ್ 17ರಿಂದ 22ರ ತನಕ ಆರು ದಿನಗಳ ಕಾಲ ಶಾರದಮಹೋತ್ಸವದ ಶತಮಾನೋತ್ಸವವನ್ನು ಅದ್ದೂರಿಯಾಗಿ  ಸಜೀಪ ದಸರಾ-2026 ಹೆಸರಿನಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಶತಮಾನೋತ್ಸವದ ಪ್ರಯುಕ್ತ ಆರು ದಿನಗಳ ಕಾಲ ಧಾರ್ಮಿಕ , ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಗೌರವಾರ್ಪಣೆ,  ಪ್ರತಿದಿನ ಭಜನಾ ಸಂಕೀರ್ತನೆ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ದೇವಿ ಪ್ರಸಾದ ಪೂಂಜಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.  ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಯುವಕ ಮಂಡಲದ ಅಧ್ಯಕ್ಷ ಎಸ್ ಶ್ರೀಕಾಂತ ಶೆಟ್ಟಿ, ಶತಮಾನೋತ್ಸವ ಸಮಿತಿ ದುಬಾಯಿ ಸಂಚಾಲಕ ರೊನಾಲ್ಡ್ ಮಾರ್ಟಿಸ್, ಈಶ್ವರ ಮಂಗಳ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪ ರಮೇಶ್ ಮೊದಲಾದವರು ಉಪಸ್ಥಿತರಿದ್ದರು  

By Suddi9

Leave a Reply

Your email address will not be published. Required fields are marked *