ಬಂಟ್ವಾಳ: ಸಂಸ್ಕೃತಿ ಮತ್ತು ಸಂಸ್ಕೃತದ ಉಳಿವು ಮುಖ್ಯವಾಗಿದೆ. ಸಂಸ್ಕೃತವು ನಶಿಸಿದರೆ ನಮ್ಮ ಜೀವನ ಹಾಗೂ ಸಂಸ್ಕೃತಿ ಬೋನ್ಸಾಯ್ ಗಿಡದಂತೆ ಕುಬ್ಜವಾಗುತ್ತದೆ. ಈ ದೆಸೆಯಲ್ಲಿ ಸಂಸ್ಕೃತದ ಕಲಿಕೆ ರಕ್ಷಣೆಗಾಗಿ ಎಲ್ಲರೂ ಶ್ರಮಿಸಬೇಕು ,ಆಂಗ್ಲಭಾಷೆಯ ದಾಸ್ಯವನ್ನು ಬಿಟ್ಟು ನಮ್ಮತನವನ್ನು ಉಳಿಸಿ ಕೊಳ್ಳಬೇಕಾಗಿದೆ ಎಂದು  ಡಾ. ಕಲ್ಲಡ್ಕ ಪ್ರಭಾಕರ ಭಟ್  ನುಡಿದರು.
 
ಕಲ್ಲಡ್ಕದ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ  ನಡೆದ ದಕ್ಷಿಣಕನ್ನಡ ಜಿಲ್ಲಾ ಪ.ಪೂ.ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘ, ದಕ್ಷಿಣಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಶ್ರೀ ರಾಮ ಪ.ಪೂ. ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ದಕ್ಷಿಣಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರಿಗಾಗಿ ನಡೆದ ಒಂದು ದಿನದ ಕಾರ್ಯಾಗಾರ ಹಾಗೂ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಹಾಗೂ ನೂತನ ಲಾಂಛನ ಅನಾವರಣಗೊಳಿಸಿ ಅವರು ಮಾತನಾಡಿದರು.
 ದಕ್ಷಿಣಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಡಾ. ನವೀನ್ ಶೆಟ್ಟಿ ಕೆ. ಅವರು ಸಭಾಧ್ಯಕ್ಷತೆ ವಹಿಸಿ ಮಾತನಾಡಿ ’ ಸಂಸ್ಕೃತ ನಮ್ಮಭಾಷೆಯಾಗಿದ್ದು, ನಮ್ಮ ಆಧ್ಯಾತ್ಮಿಕ ಸಾಮರ್ಥ್ಯವನ್ನು
ವರ್ಧಿಸಿಕೊಳ್ಳಲು ಅನುಕೂಲವಾಗುತ್ತದೆ.
 ಉಪನ್ಯಾಸಕರು ಹೊಸ ಹೊಸ ವಿಷಯವನ್ನು ಅರಿತುಕೊಳ್ಳವ ವಿದ್ಯಾರ್ಥಿಗಳಾಗಬೇಕು,ಇಂತಹ ಕಾರ್ಯಾಗಾರಗಳಲ್ಲಿ ಭಾಗವಹಿಸುವುದರಿಂದ ಉಪನ್ಯಾಸಕರ ಕೌಶಲ ಮತ್ತು ಜ್ಞಾನ ವೃದ್ಧಿಯಾಗಿ ವಿದ್ಯಾರ್ಥಿಗಳ ಏಳಿಗೆಗೆ ಸಹಕಾರಿಯಾಗುತ್ತದೆ ಎಂದರು.
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಂಸ್ಕೃತದಲ್ಲಿ ಪೂರ್ಣಾಂಕ ಪಡೆದು ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ರಚಿತಾ ರಾಘವೇಂದ್ರ , ವೃಷಾ , ಗ್ರೀಷ್ಮ ಹಾಗೂ ನಿಜ ಕುಲಾಲ್ ಅವರನ್ನು  ಹೆತ್ತವರ ಜೊತೆ ಗೌರವಿಸಲಾಯಿತು.
 ಶ್ರೀರಾಮ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ  ವಸಂತ ಬಲ್ಲಾಳ್ ಉಪಸ್ಥಿತರಿದ್ದರು.  ಗೌರವಾಧ್ಯಕ್ಷರಾದ ರಮೇಶ್ ಆಚಾರ್ಯರು ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಡಾ. ಪ್ರಸನ್ನಕುಮಾರ ಐತಾಳ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಸುರೇಖಾ ತಂತ್ರಿ ವಂದಿಸಿದರು. ಶ್ರೀರಾಮ ಪ.ಪೂ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಮಹೇಂದ್ರ ಭಟ್ ನಿರ್ವಹಿಸಿದರು.
ಗೋಷ್ಟಿಗಳು
ಬಳಿಕ ನಡೆದ ಗೋಷ್ಠಿಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ  ಪರಮೇಶ್ವರ ಹೆಗಡೆಯವರು ’ ಸಂಸ್ಕೃತ ಕಥಾ ಸಾಹಿತ್ಯ ’  ಎಂಬ ವಿಚಾರವಾಗಿ ಡಾ. ಪದ್ಮನಾಭ ಮರಾಠೆ ಅವರು ’ ಪ್ರಾಚೀನ ಸಂಸ್ಕೃತ ಗ್ರಂಥಗಳು ಹೊಸ ಪರಿಷ್ಕರಣೆ ’  ಎಂಬ ವಿಷಯವನ್ನು ಮಂಡಿಸಿದರು.
 ಶಿರಸಿಯ ಸಂಸ್ಕೃತ ಭಾಷಾ ಉಪನ್ಯಾಸಕರಾದ ಡಾ. ಸೂರ್ಯನಾರಾಯಣ ಹೆಗಡೆ ಇವರು ಸಂಸ್ಕೃತ ಪ್ರಶ್ನೆಪತ್ರಿಕೆಗಳ ಸ್ವರೂಪದ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿವರಿಸಿದರು.
ಸಮಾರೋಪ ಸಮಾರಂಭ
 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ  ಕರ್ನಾಟಕ ರಾಜ್ಯ ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿಗಳಾದ ವಿಠಲ ಅವರು ಮಾತನಾಡಿ, ಪ್ರತಿಯೊಂದು ಪಠ್ಯ ವಿಷಯದ ಬಗ್ಗೆ ಸರಿಯಾದಂತಹ ಮಾಹಿತಿ ಪಡೆದುಕೊಳ್ಳಬೇಕು,
 ನಾವು ಸಂಘಟಿತರಾದರೆ ಏನನ್ನು ಸಾಧಿಸಬಹುದು ’  ಎಂದು ಹೇಳಿದರು. 
ದ.ಕ  ಜಿಲ್ಲಾ ಪದವಿಪೂರ್ವ ಕಾಲೇಜುಗಳ ಸಂಸ್ಕೃತ ಭಾಷಾ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಡಾ. ಪ್ರಸನ್ನಕುಮಾರ ಐತಾಳ್ ಇವರು ಅಧ್ಯಕ್ಷತೆ ವಹಿಸಿದ್ದರು.  ಶ್ರೀರಾಮ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ  ವಸಂತ ಬಲ್ಲಾಳ ಸಮಾರೋಪ ಭಾಷಣ ಮಾಡಿದರು .  ಉಪನ್ಯಾಸಕರಾದ ವೆಂಕಟರಮಣ ಪೈಕ ಕಾರ್ಯಕ್ರಮ ನಿರ್ವಹಿಸಿ , ಶ್ರೀನಿವಾಸ ಮಧ್ಯಸ್ಥ ವಂದಿಸಿದರು. ಮೂವತ್ತಕ್ಕೂ ಹೆಚ್ಚಿನ ಕಾಲೇಜುಗಳ ಸಂಸ್ಕೃತ ಉಪನ್ಯಾಸಕರು 

By Suddi9

Leave a Reply

Your email address will not be published. Required fields are marked *