ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ ಬಂಟ್ವಾಳ ತಾಲೂಕು ಸಿದ್ದಕಟ್ಟೆ ವಲಯದ ಅರಳ ಶ್ರೀ ಕ್ಷೇತ್ರ ಗರುಡ ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ನಡೆಯಿತು

ಕೆನರಾ ಬ್ಯಾಂಕ್ ಅಸೋಸಿಯೇಶನ್ ಅಧಿಕಾರಿ ರಮೇಶ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸ್ತಯಳೀಯ ಗ್ರಾ.ಪಂ.ಮಾಜಿ ಅಧ್ಯಕ್ಷ ಜಗದೀಶ್ ಆಳ್ವ ಇವರು ಮಾತನಾಡಿ ಪರಿಸರ ಉಳಿಸುವುದು ನಮ್ಮೆಲ್ಲರ ಹಕ್ಕು ಎಂದರು.
ಶ್ರೀ ಕ್ಷೇತ್ರ ಕೊಟ್ಟದಡ್ಕ ಒಕ್ಕೂಟದ ಅಧ್ಯಕ್ಷರಾದ ಸದಾನಂದ ಶೆಟ್ಟಿ ,ಜನಜಾಗೃತಿ ಸದಸ್ಯರಾದ
ಸರಸ್ವತಿ ಆಳ್ವ, ಒಕ್ಕೂಟದ ಮಾಜಿ ಅಧ್ಯಕ್ಷರಾದ
ಶಶಿಧರ್ ಆಚಾರ್ಯ, ಗಿರೀಶ್ ಶೆಟ್ಟಿ ,ಓಂ ಜನ ಹಿತಾಯ ಆಂಗ್ಲ ಮಾಧ್ಯಮ ಶಾಲೆ ರಂಜನ್ ಕುಮಾರ್ ಶೆಟ್ಟಿ ಮೊದಲಾದವರಿದ್ದರು.
ಮಹೇಶ್ವರಿ ಸೇವಾ ಪ್ರತಿನಿಧಿ ಸ್ವಾಗತಿಸಿದರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಭಾಸ್ಕರ್ ಎಂ ನಿರೂಪಿಸಿದರು.ಅರಳ ಸೇವಾ ಕೇಂದ್ರದ ವಿಎಲ್ಎ ವಂದಿಸಿದರು.
