ಬಂಟ್ವಾಳ:  ದ.ಕ.ಜಿ.ಪಂ.ಕೃಷಿ ಇಲಾಖೆ, ಬಂಟ್ವಾಳ ಇದರ ವತಿಯಿಂದ 2026-27 ನೇ ಸಾಲಿನ ಆತ್ಮ ಯೋಜನೆಯಡಿ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸುವ ಕಲಾ ಜಾಥಾ ಕಾರ್ಯಕ್ರಮವು ಬಂಟ್ವಾಳ ತಾ.ನ  ಅಮ್ಮಾಡಿ ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಸಲಾಯಿತು.

ಅಮ್ಟಾಡಿ ಗ್ರಾ.ಪಂ.ಪಿಡಿಒ ನಿತಗಯಾನಂದ ಅವರು ತಮಟೆ ಬಾರಿಸುವ ಮೂಲಕ ಕಲಾ ಜಾಥಕ್ಕೆ ಚಾಲನೆ ನೀಡಿದರು.ಜೋಡುಮಾರ್ಗ ನೇಸರ ತಂಡದ ಮೌನೇಶ್ ವಿಶ್ವಕರ್ಮ ನೇತೃತ್ವದ ಕಲಾ ಜಾಥಾದಲ್ಲಿರೈತ ಸಂಪರ್ಕ ಕೇಂದ್ರ, ಬೆಳೆ ವಿಮೆ, ಬೆಳೆ ಸಮೀಕ್ಷೆ, ಕೃಷಿ ಪಂಡಿತ ಪ್ರಶಸ್ತಿ, ಮಣ್ಣು ಮತ್ತು ನೀರು ಸಂರಕ್ಷಣೆ, ಪಿ.ಎಮ್ ಕಿಸಾನ್, ಪಿಎಮ್ ಕೆಎಸ್‌ವೈ ಹಾಗೂ ಇನ್ನಿತರ ಯೋಜನೆಗಳ ಕುರಿತು ಅರಿವು ಮೂಡಿಸಲಾಯಿತು.
ಬಂಟ್ವಾಳ ತಾಲೂಕಿನ ತಾಂತ್ರಿಕ ಕೃಷಿ ಅಧಿಕಾರಿಯಾದ  ನಂದನ್ ಶೆಣೈಯವರು  ಪ್ರಸ್ತಾವನೆಗೈದರು.ಬಂಟ್ವಾಳ ಹೋಬಳಿಯ ತಾಂತ್ರಿಕ ಸಹಾಯಕರಾದ  ಚಂದ್ರಕಲಾ, ಬಂಟ್ವಾಳ ತಾಲೂಕು ಆತ್ಮ ಯೋಜನೆಯ ಬಿಟಿಎಂ ಕುಮಾರಿ ಸ್ನೇಹ,ಕೃಷಿ ಸಖಿ ಅಶ್ವಿತಾ ಮೊದಲಾದವರಿದ್ದರು .
ಇದೇವೇಳೆಎಂಕೆಪಿಸಿಯ ವಿವೇಕ್ ಅವರು ಮಹಿಳಾ ಕಿಸಾನ್ ನಿಂದ ಸಿಗುವ ಸವಲತ್ತುಗಳ ಮಾಹಿತಿ ನೀಡಿದರು.ಅದೇರೀತಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಇಕೆವೈಸಿಯನ್ನು ಬಾಕಿ ಉಳಿದ ರೈತರಿಗೆ ಮಾಡಿಕೊಡಲಾಯಿತು.

By Suddi9

Leave a Reply

Your email address will not be published. Required fields are marked *