ಬಂಟ್ವಾಳ: ಬಿರುವೆರ್ ಸೇವಾ ಟ್ರಸ್ಟ್ (ರಿ.), ನರಿಕೊಂಬು ವತಿಯಿಂದ ಬಿಲ್ಲವರ ಕುಟುಂಬ ಮಿಲನ ಕಾರ್ಯಕ್ರಮ ಭಾನುವಾರ ನರಿಕೊಂಬುವಿನಲ್ಲಿ  ನಡೆಯಿತು.ಕೇಶವ ಶಾಂತಿ ನರಿಕೊಂಬು ಅವರು ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು.ಸ್ಥಳೀಯ ಪ್ರಮುಖರಾದ ಜಗನ್ನಾಥ ಬಂಗೇರ ನಿರ್ಮಾಲ್,ವೆಂಕಟೇಶ್ ಶಾಂತಿ, ಶ್ರೀಧರ ಮೇಸ್ತ್ರಿ ಸಾಜಂಕ್ಪಾಳಿಕೆ ಹಾಗೂ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ದಿನೇಶ್ ಭಾಗೀರಥಿ ಕೋಡಿ ಅವರು ಉಪಸ್ಥಿತರಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು ಮಾತನಾಡಿ, ಬಿರುವೆರ್ ಸೇವಾ ಟ್ರಸ್ಟ್ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿದ್ದು, ಬಿಲ್ಲವ ಸಮಾಜಕ್ಕೆ ಮಾತ್ರ ಸೀಮಿತವಾಗದೆ ಎಲ್ಲ ಸಮಾಜದವರನ್ನೂ ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಗಳು ಜಿಲ್ಲೆಯ ಇತರ ಸಂಘ-ಸಂಸ್ಥೆಗಳಿಗೂ ಮಾದರಿಯಾಗಿದೆ ಎಂದರು.

ಮಾಜಿ ಸಚಿವ ಬಿ. ರಮಾನಾಥ ರೈ ಅವರು ಮಾತನಾಡಿ ಸಂಘಟನೆಗಳು ಸಮಾಜದಲ್ಲಿ ಐಕ್ಯತೆ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.ನಾರಾಯಣಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,ಉಪಾಧ್ಯಕ್ಷ ಜಯಪ್ರಕಾಶ್,ಅಖಿಲ ಭಾರತ ಸೈನಿಕ ಸಂಘ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ವಿ.ಎನ್. ಮೋನಪ್ಪ, ಮಾಜಿ ಸೈನಿಕ ನಾಗೇಶ್ ಎಸ್., ಬೂಡ  ಅಧ್ಯಕ್ಷ ಬೇಬಿ ಕುಂದರ್, ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ನ್ಯಾಯವಾದಿ ಶೈಲಜಾ ರಾಜೇಶ್, ಮೂರ್ತೆದಾರರ ಸೇವಾ ಸಂಘ ಶಂಭೂರು ಅಧ್ಯಕ್ಷ ಪುರುಷೋತ್ತಮ ಸಾಲ್ಯಾನ್,ಬಿಲ್ಲವ ಮುಖಂಡರಾದ ಸಂಜೀವ ಪೂಜಾರಿ ಕುಚ್ಚುಗುಡ್ಡೆ, ಹರಿಕೃಷ್ಣ ಬಂಟ್ವಾಳ,ರಾಜೇಶ್ ಸುವರ್ಣ, ಯಶವಂತ ದೇರಾಜೆ, ಗಣೇಶ್ ಸುವರ್ಣ,ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆನಂದ ಸಾಲ್ಯಾನ್,  ವಿಶ್ವನಾಥ ಪೂಜಾರಿ, ಶೈಲೇಶ್ ಪೂಜಾರಿ, ಸಂತೋಷ್ ಕುಮಾರ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಸೀತಾರಾಮ ಪೂಜಾರಿ ಬೋಳಂತುಇರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಜೀವ ನಾಟಿ ವರದಿ ವಾಚಿಸಿದರು. ಪುರುಷೋತ್ತಮ ಸಾಲ್ಯಾನ್ ಸ್ವಾಗತಿಸಿದರು. ಕಾರ್ಯದರ್ಶಿ ಮೋಹಲತಾ ವಂದಿಸಿದರು. ರಾಜೇಶ್ ದರ್ಕಸ್ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *