ಬಂಟ್ವಾಳ: ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳದ ಸೇವಾ ಸಪ್ತಾಹದ ಅಂಗವಾಗಿ ವಿಶ್ವಹಿಂದೂ ಪರಿಷದ್–ಭಜರಂಗದಳ ಕುಂಟಲಪಲ್ಕೆ ಘಟಕ, ಬಂಟ್ವಾಳ ಪ್ರಖಂಡದ ವತಿಯಿಂದ ಗೋಸಂರಕ್ಷಣೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ “ಗೋವಿಗಾಗಿ ಮೇವು” ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದ ಭಾಗವಾಗಿ ಪಜೀರು ಗೋಶಾಲೆಗೆ ಒಂದು ಪಿಕಪ್ ಪೂರ್ತಿ ಹಸಿ ಹುಲ್ಲನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಬಂಟ್ವಾಳ ಪ್ರಖಂಡದ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಅವರು ಮಾತನಾಡಿ ಗೋಸೇವೆಯನ್ನು ಸಮಾಜದ ಪ್ರತಿಯೊಬ್ಬರೂ ತಮ್ಮ ಕರ್ತವ್ಯವೆಂದು ಪರಿಗಣಿಸಬೇಕೆಂಬ ಸಂದೇಶದೊಂದಿಗೆ ಈ ಸೇವಾ ಕಾರ್ಯವನ್ನು ಆಯೋಜಿಸಲಾಗುತ್ತಿದೆ ಎಂದರು.
ವಿ.ಹಿ.ಪ.ಮುಖಂಡರಾದ ಸಂತೋಷ್ ಸರಪಾಡಿ, ದೀಪಕ್ ಅಜೆಕಲ, ತಿಲಕ್ ಕಿಣಿ, ಪ್ರವೀಣ್ ಕುಲಾಲ್ (ಕುಂಟಲಪಲ್ಕೆ) ಉಪಸ್ಥಿತರಿದ್ದರು.
ಘಟಕದ ಉಪಾಧ್ಯಕ್ಷ ಚಂದ್ರಹಾಸ ರೈ ಮೂಲಕಜೆ, ಬೇಬಿರಾಜ್ ಪೂಜಾರಿ, ದೀಕ್ಷಿತ್ ಬಸದಿ, ದೀಕ್ಷಿತ್ ಪೂಜಾರಿ , ಅಕ್ಷಯ್ ರೈ, ಸುಶಾನ್ ಶೆಟ್ಟಿ, ಪ್ರಶಾಂತ್ ಕುಲಾಲ್ ಮರಾಯಿದೊಟ್ಟು, ವಿದ್ಯಾರ್ಥಿ ಪ್ರಮುಖ್ ಅಜ್ಞಾನ್ ರೈ , ಮೋನಪ್ಪ ಪೂಜಾರಿ ಸಹಿತ ಕಾರ್ಯಕರ್ತರು ಭಾಗವಹಿಸಿದರು.
