ಬಂಟ್ವಾಳ :ಸಂಸ್ಕಾರ ಭಾರತೀ ದ.ಕ ಜಿಲ್ಲಾ ಇದರ ವತಿಯಿಂದ ಅಸ್ತಂಗತರಾದ ಖ್ಯಾತ ಗಾಯಕಿ ಎಸ್.ಜಾನಕಿಯವರಿಗೆ ನುಡಿನಮನ ಕಾರ್ಯಕ್ರಮ ಬಿ ಸಿ ರೋಡ್ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.

ಸಂಸ್ಕಾರಭಾರತೀಯ ಪಾರಂಪರಿಕ ಕಲಾ ಸಂಯೋಜಕಿ ಡಾ.ವಾರಿಜಾ ಅವರು ಅಗಲಿದ ಜಾನಕಮ್ಮನಿಗೆ ನುಡಿನಮನ ಸಲ್ಲಿಸಿ ಮಾತನಾಡುತ್ತಾ “ನಮ್ಮ ಸಮಕಾಲೀನರಾಗಿ ಜಾನಕಮ್ಮ ಇದ್ದರೆಂಬುದೇ ನಮ್ಮ ಸೌಭಾಗ್ಯ, ಮಗುವಿನ ಸ್ವರಕ್ಕೆ ಮಗುವಾಗಿ,ದನಿ ನಡುಗುವ ಹಿರಿಯ ವಯಸ್ಸಿಗೂ ಸ್ವರವಾಗಿ ಹತ್ತಿಪ್ಪತ್ತು ಭಾಷೆಗಳಲ್ಲಿ ನಲವತ್ತೆಂಟು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದರೆಂದರೆ  ಸುಲಭದ ಮಾತಲ್ಲ, ನೂರಾರು ಪ್ರಶಸ್ತಿಗಳನ್ನು ಪಡೆದಿದ್ದರೂ ಅವರ  ಬದುಕು ಸರಳತೆಯಲ್ಲಿ ಹಾಸುಹೊದ್ದಂತಿತ್ತು.ಅವರ ಕಂಠಸಿರಿಯಲ್ಲಿ ಬಾಡಿದ ಹೂವೂ ಅರಳಿತು! ಪದ್ಮವಿಭೂಷಣದಂತಹ ರಾಷ್ಟ್ರ ಪ್ರಶಸ್ತಿಯೂ ಒಲಿಯಿತು.ಅವರ ನಡೆನುಡಿಯೇ‌ ನಮಗೆ‌ ಆದರ್ಶವೆಂದರು.
ಸಂಸ್ಕಾರ ಭಾರತೀ ದ.ಕ.ಜಿಲ್ಲಾ ಪ್ರದರ್ಶಕ ಕಲಾ ಸಂಯೋಜಕರಾದ  ಬಿ.ದೀಪಕ್ ಕುಮಾರ್ ರವರು ಮಾತನಾಡಿ, ” ಜಾನಕಮ್ಮನ ಹಾಡುಗಳ ಜೊತೆಜೊತೆಗೇ ನಾವು ಬೆಳೆದವರು.ಅವರು ಎಲ್ಲಾ ಕಲಾ ಸಂಗೀತ ಪ್ರಕಾರ ಹಾಗೂ ಎಲ್ಲಾ ಭಾವನೆಗಳಿಗೆ ತಮ್ಮ ಕಂಠಸಿರಿಯ ಮೂಲಕ  ಜೀವ ತುಂಬಿ ನಮ್ಮ ಜೀವನದ ಸುಂದರ‌ ನೆನಪುಗಳಿಗೆ ಕಾರಣರಾಗಿದ್ದಾರೆ.ಅವರು ಕೇವಲ ಕಂಠವನ್ನಷ್ಟೇ ದುಡಿಸಿಕೊಂಡು ತನ್ಮಯತೆಯಿಂದ ಹಾಡಿ ಕೇಳುಗನನ್ನು ಲೀನವಾಗುವಂತೆ ಮಾಡುತ್ತಿದ್ದರು.ಇದು ಉತ್ತಮ ಗಾಯಕರ ಲಕ್ಷಣ.ಅವರು ಅಸ್ತಂಗತರಾದವರಲ್ಲ,ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ನಂದಾದೀಪವಾಗಿ ಉಳಿದವರು” ಎಂದರು.
ಸಂಸ್ಕಾರ ಭಾರತೀ ಜಿಲ್ಲಾಧ್ಯಕ್ಷರಾದ ತಾರಾನಾಥ ಕೊಟ್ಟಾರಿ,ಫರಂಗಿಪೇಟೆ ಅವರು ಸಭಾಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತೀಯ ದಕ್ಷಿಣ ಪ್ರಾಂತದ ಉಪಾಧ್ಯಕ್ಷೆ ರೂಪಲೇಖ ಹರಿಕೃಷ್ಣ, ಕಾರ್ಯದರ್ಶಿ  ನಾಗರಾಜ ಶೆಟ್ಟಿ, ಸಹ ಕೋಶಪ್ರಮುಖ್  ರಘುವೀರ್ ಗಟ್ಟಿ, ಜಿಲ್ಲಾ ಕಾರ್ಯದರ್ಶಿ  ವಿನುತಾ ಕೆ.ಸಾಲೆತ್ತೂರು, ಕೋಶ ಪ್ರಮುಖ್  ವಿಜಯಾ ಬಿ.ಶೆಟ್ಟಿ ಸಾಲೆತ್ತೂರು, ಉಪಾಧ್ಯಕ್ಷರಾದ  ಅನಿಲ್ ಪಂಡಿತ್, ಸಂಪತ್ ಸುವರ್ಣ, ಸಹಕಾರ್ಯದರ್ಶಿ  ಬಿ.ಶಶಿಕುಮಾರ್, ಪ್ರವೀಣ್ ಕುಮಾರ್ ಶೆಟ್ಟಿ,ಕಾರ್ಯಕಾರಿ ಸದಸ್ಯರಾದ  ಪುರುಷೋತ್ತಮ ಎನ್, ಗಿರೀಶ್ ವೇಣೂರು ಹಾಗೂ ಸಂಸ್ಕಾರ ಮಿತ್ರರು ಹಾಜರಿದ್ದರು. ವಿನುತಾ ಕೆ.ಸಾಲೆತ್ತೂರು ರವರು ಕಾರ್ಯಕ್ರಮ ನಿರ್ವಹಿಸಿದರು. 

By Suddi9

Leave a Reply

Your email address will not be published. Required fields are marked *