ಬಂಟ್ವಾಳ:ಮದ್ಯಪಾನವನ್ನು ತ್ಯಜಿಸುವುದು ಎಂದರೆ ಕೇವಲ ಒಂದು ಕೆಟ್ಟ ಅಭ್ಯಾಸವನ್ನು ಬಿಡುವುದಲ್ಲ; ಅದು ಕುಟುಂಬದ ಮೇಲಿನ ಪ್ರೀತಿ, ಜವಾಬ್ದಾರಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುವ ಮಹತ್ವದ ನಿರ್ಧಾರವಾಗಿದೆ ಶ್ರೀ.ಕ್ಷೇ.ಧ.ಗ್ರಾ.ಯೋ.ಯ
ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ ಪಾಯಸ್ ಅವರು ಹೇಳಿದ್ದಾರೆ.

ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವಾಮದಪದವು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ವಾಮದಪದವಿನ ಬಸ್ತಿಕೋಡಿಶ್ರೀ ಪದ್ಮಾವತಿ ಸಭಾಭವನದಲ್ಲಿ ನಡೆಯುತ್ತಿರುವ 2076ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮದ್ಯವಿಲ್ಲದ ಮನೆಯಲ್ಲಿ ಪ್ರೀತಿ ಹೆಚ್ಚುತ್ತದೆ, ಆರೋಗ್ಯ ಸುಧಾರಿಸುತ್ತದೆ, ಮಕ್ಕಳಿಗೆ ಉತ್ತಮ ವಾತಾವರಣ ದೊರೆಯುತ್ತದೆ ಮತ್ತು ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ ಎಂದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷರಾದ ಹರೀಂದ್ರ ಪೈ, ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ , ಕೋಶಾಧಿಕಾರಿ ಅರುಣ್ ಕುಮಾರ್ ಇಂದ್ರ ಅಜ್ಜಿಬೆಟ್ಟು, ಕಾರ್ಯದರ್ಶಿ ಜಯಾನಂದ ಪಿ, ಉಪಾಧ್ಯಕ್ಷರಾದ ಪ್ರವೀಣ್ ಕಾಡಬೆಟ್ಟು ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಮದ್ಯವರ್ಜನ ಶಿಬಿರದಲ್ಲಿ 63 ಮಂದಿ ಪಾನಮುಕ್ತರಾಗಿ ಹೊಸ ಜೀವನಕ್ಕೆ ಕಾಲಿಟ್ಟರು
