ಬಂಟ್ವಾಳ :  ಬಿ.ಸಿ. ರೋಡ್ ರಿಕ್ಷಾ ಚಾಲಕರ ನಿಲ್ದಾಣದ ಸಮಸ್ಯೆಗೆ ಸಂಬಂಧಿಸಿದಂತೆ ರಿಕ್ಷಾ ಚಾಲಕರ ನಿಯೋಗವೊಂದು ಮಾಜಿ ಸಚಿವರಾದ  ಬಿ. ರಮಾನಾಥ ರೈ ಅವರ ನಿವಾಸಕ್ಕೆ ಭೇಟಿ ನೀಡಿ ಅಹವಾಲನ್ನು  ಸಲ್ಲಿಸಿತು.

ರಿಕ್ಷಾ ಚಾಲಕರು ನಿಲ್ದಾಣದ ಕೊರತೆಯಿಂದ ಎದುರಾಗುತ್ತಿರುವ ತೊಂದರೆಗಳು, ಪ್ರಯಾಣಿಕರಿಗೆ ಉಂಟಾಗುತ್ತಿರುವ ಅಸೌಕರ್ಯ ಹಾಗೂ ತಮ್ಮ ಜೀವನೋಪಾಯದ ಮೇಲಿನ ಪರಿಣಾಮದ ಬಗ್ಗೆ ಮಾಜಿ ಸಚಿವರ ಗಮನಕ್ಕೆ ತಂದರು.

ರಿಕ್ಷಾ ಚಾಲಕರ ಅಹವಾಲುಗಳನ್ನು ಆಲಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಅವರು ಸಮಸ್ಯೆಯ ಗಂಭೀರತೆಯನ್ನು ಅರಿತು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯಾಡಳಿತದೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಸೂಕ್ತ ಪರಿಹಾರ ಕಂಡುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು

By Suddi9

Leave a Reply

Your email address will not be published. Required fields are marked *