ಬಿ.ಸಿ.ರೋಡು:ಮಂಗಳಾ ಫ್ರೆಂಡ್ಸ್ ಸರ್ಕಲ್ (ರಿ.) ಅಲೆತ್ತೂರು, ಬಿ.ಸಿ.ರೋಡು ಇದರ ನೂತನ ಅಧ್ಯಕ್ಷರಾಗಿ ಶ್ರೀಧರ ಶೆಟ್ಟಿ ಪುನರಾಯ್ಕೆ
ಮಂಗಳಾ ಫ್ರೆಂಡ್ಸ್ ಸರ್ಕಲ್(ರಿ.) ಅಲೆತ್ತೂರು ಇದರ 2026-27 ನೇ ಸಾಲಿನ ವಾರ್ಷಿಕ ಮಹಾಸಭೆಯು ಜೂನ್ 21ರಂದು ಭಾನುವಾರ ಅಲೆತ್ತೂರು ಮಂಗಳಾ ಭವನದಲ್ಲಿ ನಡೆಯಿತು.

ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ ಗೌರವಧ್ಯಕ್ಷರಾದ ನೇಮಿರಾಜ ಶೆಟ್ಟಿ ಕೊಡಂಗೆ ಅಧ್ಯಕ್ಷತೆಯಲ್ಲಿ ನಡೆದ
ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಅಧ್ಯಕ್ಷರಾಗಿ ಶ್ರೀಧರ್ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ನಾಗೇಶ್ ಕುಲಾಲ್, ಕಾರ್ಯದರ್ಶಿಯಾಗಿ ಲೋಹಿತ್ ಕರ್ಕೇರ, ಜೊತೆ ಕಾರ್ಯದರ್ಶಿಯಾಗಿ ಅಭಿಷೇಕ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಯಶವಂತ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ರಂಜಿತ್ ಪೂಜಾರಿ ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ನಿತಿನ್ ಶೆಟ್ಟಿ, ಪ್ರಚಾರ ಸಮಿತಿ ಸದಸ್ಯರಾಗಿ ವಿಜಯ್ ಸುವರ್ಣ, ಶರಣ್ ಕುಲಾಲ್, ಧನರಾಜ್, ಸ್ರಜನ್, ಪ್ರಜ್ವಲ್, ಪ್ರಶಾಂತ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಭಾಸ್ಕರ್ ಕುಲಾಲ್, ವಿಜಯ್ ಸುವರ್ಣ, ನಿತಿನ್ ಪೂಜಾರಿ, ಪ್ರಶಾಂತ್, ವಾಸುದೇವ ಅಲೆತ್ತೂರು, ವಿಶ್ವನಾಥ ಪೈ ಬಿ.ಸಿ.ರೋಡು, ದಿನೇಶ್ ಸುವರ್ಣ, ಉಮೇಶ್ ಬಂಗೇರ, ಸಂದೀಪ್ ಬಿ ಬಿ.ಸಿ.ರೋಡು ಆಯ್ಕೆಯಾದರು. ಈ ಸಂದರ್ಭದಲ್ಲಿ ಪರಮೇಶ್ವರ ಶೆಟ್ಟಿ ಚಾವಡಿ ಮನೆ ಅಲೆತ್ತೂರು, ಮೋನಪ್ಪ ಪೂಜಾರಿ ಅಲೆತ್ತೂರು, ಅಶ್ವಥ್ ಶೆಟ್ಟಿ, ಹಿಮಕರ ಪೂಜಾರಿ, ನಾರಾಯಣ ಪೂಜಾರಿ ಉಪಸ್ಥಿತರಿದ್ದರು.
