ಬಂಟ್ವಾಳ: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಪತ್ರಕರ್ತ, ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಗಟ್ಟಿ ಅವರಸಾರ್ವಜನಿಕ ಶ್ರದ್ಧಾಂಜಲಿ ಸಭೆ, ನುಡಿನಮನ ಕಾರ್ಯಕ್ರಮ ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಶುಕ್ರವಾರ ಸಂಜೆ ನಡೆಯಿತು.

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ತುಕಾರಾಮ ಪೂಜಾರಿ ನುಡಿನಮನ ಸಲ್ಲಿಸಿ ತಾನು ಎಸ್.ವಿ.ಎಸ್. ಕಾಲೇಜಿನಲ್ಲಿ ಸೇರ್ಪಡೆಯಾಗಲು ಪ್ರೊ.ಗಟ್ಟಿಯವರೇ ಕಾರಣ,ಗಟ್ಟಿಯವರ ನಡವಳಿಕೆ ,ಅವರು ತೋರಿಸುತ್ತಿದ್ದ ಆತ್ಮೀಯತೆ,ವ್ಯಕ್ತಿತ್ವ ಅಪೂರ್ವವಾದುದು,ತುಳು ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದಬೆಳವಣಿಗೆಯಲ್ಲು ಅವರ ಕೊಡುಗೆ ಅಪಾರವಾಗಿದೆ.ಅವರ ವ್ಯಕಿತ್ವ ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಬಿ.ಎನ್.ಪುಷ್ಪರಾಜ್ ಮಾತನಾಡಿ ಮಾರ್ಗದರ್ಶನ ನೀಡಿದ್ದನ್ನು ಸ್ಮರಿಸಿದರು. ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಮಾತನಾಡಿ ತಾಲೂಕು ಪತ್ರಕರ್ತರ ಸಂಘದ ಸ್ಥಾಪನೆಯ ಕುರಿತು ಮಾತನಾಡಿದರು.ಹಿರಿಯ ಪತ್ರಕರ್ತ ವೆಂಕಟೇಶ ಬಂಟ್ವಾಳ ಅವರು ಗಟ್ಟಿಯ ರೊಂದಿಗೆ ವೃತ್ತಿಜೀವನವನ್ನು ನೆನಪಿಸಿಕೊಂಡರು. ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಪಾಂಡುರಂಗ ನಾಯಕ್ ಮಾತನಾಡಿ, ಪ್ರೊ.ಗಟ್ಟಿಯವರು ತನ್ನ ವೃತ್ತಿಗೆ ಮಾರ್ಗದರ್ಶಕರಾಗಿ ಇದ್ದುದನ್ನು ಸ್ಮರಿಸಿ, ಕಾಲೇಜಿನಲ್ಲಿ ಶಿಸ್ತನ್ನು ತಂದವರು, ಉತ್ತಮ ಆಡಳಿತಾಧಿಕಾರಿ ಆಗಿದ್ದರು ಎಂದರು.
ಬಾಲಕೃಷ್ಣ ಗಟ್ಟಿಯವರ ಪುತ್ರ ಸುಕುಮಾರ ಗಟ್ಟಿ ಮಾತನಾಡಿ ಕಾರ್ಯನಿರತ ಪತ್ರಕರ್ತರ ಸಂಘ ನುಡಿನಮನ ಕಾರ್ಯಕ್ರಮ ಏರ್ಪಡಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ,ಕವಿ ಅಬುಬಕ್ಕರ್ ಅಮ್ಮುಂಜೆ,ಬಂಟ್ವಾಳ ಜೇಸಿಸ್ ಅಧ್ಯಕ್ಷ ಕಿಶೋರ್ ಹಾಗೂ ಅವರ ಉಪನ್ಯಾಸಕ ಸಹಪಾಠಿಗಳು ಮತ್ತಿತರರಿದ್ದರು.
ತಾಲೂಕು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸಂದೀಪ್ ಸಾಲ್ಯಾನ್ ವಂದಿಸಿದರು.ಸಂಘದ ಸದಸ್ಯರಾದ ರತ್ನದೇವ್ ಪುಂಜಾಲಕಟ್ಟೆ,ಹರೀಶ್ ಮಾಂಬಾಡಿ,ವಾಮನ ಪೂಜಾರಿ ಪೊಳಲಿ ಸಹಕರಿಸಿದರು.
