ಬಂಟ್ವಾಳ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 12 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಆಯುರಾರೋಗ್ಯ, ದೀರ್ಘಾಯುಷ್ಯ ಮತ್ತು ರಾಷ್ಟ್ರಸೇವೆಗೆ ಮತ್ತಷ್ಟು ಶಕ್ತಿ ಲಭಿಸಲಿ ಎಂಬ ಸಂಕಲ್ಪದೊಂದಿಗೆ ವಾಮದಪದವು ಸಮೀಪದ ಮಾವಿನಕಟ್ಟೆ ಶ್ರೀ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಸನಾತನ ಹಿಂದೂ ಧರ್ಮದ ಪರಿಪಾಲನೆ, ರಾಷ್ಟ್ರೀಯ ವಿಚಾರಧಾರೆ ಹಾಗೂ ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಸಮರ್ಥ ನಾಯಕತ್ವ ನೀಡುತ್ತಿದ್ದಾರೆ. ಭಾರತವು ವಿಶ್ವಮಟ್ಟದಲ್ಲಿ ಮತ್ತಷ್ಟು ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುವಂತಾಗಲಿ ಎಂದು ಹೇಳಿದರು.
ದೇವಸ್ಥಾನದ ಅರ್ಚಕ ಜಗದೀಶ್ ಶೆಟ್ಟಿ ಮಾವಿನಕಟ್ಟೆ ವಿಶೇಷ ಪೂಜೆ ನೆರವೇರಿಸಿದರು.ಕುಕ್ಕಿಪಾಡಿ ಹಾಗೂ ಎಲಿಯನಡುಗೋಡು ಬಿಜೆಪಿಶಕ್ತಿ ಕೇಂದ್ರಗಳ ವತಿಯಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಕುಕ್ಕಿಪಾಡಿ ಶಕ್ತಿ ಕೇಂದ್ರದ ಪ್ರಮುಖ ಯೋಗೀಶ್ ಆಚಾರ್ಯ, ಕುಕ್ಕಿಪಾಡಿ ಗ್ರಾಪಂ ಮಾಜಿ ಅಧ್ಯಕ್ಷ ಶೇಖರ್‌ಶೆಟ್ಟಿ ಬದ್ಯಾರ್, ಬೂತ್ ಅಧ್ಯಕ್ಷ
ಲಿಂಗಪ್ಪಪೂಜಾರಿ ಮತ್ತು ಪುಷ್ಪರಾಜ್ ಪೂಜಾರಿ, ಬೂತ್ ಕಾರ್ಯದರ್ಶಿ ಶಿವಾನಂದ ಪೂಜಾರಿ, ಪ್ರಭಾತ್ ನಾಯಕ್, ಪ್ರವೀಣ್ ಶೆಟ್ಟಿ, ಪಕ್ಷದ ಪ್ರಮುಖರಾದ ಹರೀಶ್ ಪೂಜಾರಿ, ರಾಜು ಪೂಜಾರಿ, ಯಶವಂತ ಆಚಾರ್ಯ ಉಪ್ಪಿರ, ಪೂವಪ್ಪ ಪೂಜಾರಿ ಮತ್ತಿತರಿದ್ದರು.
