ಬಂಟ್ವಾಳ: ಕಲ್ಲಡ್ಕ ಶ್ರೀರಾಮ  ಇಂಗ್ಲಿಷ್ ಮೀಡಿಯಂ ಸ್ಕೂಲ್ ನ “ಶ್ರೀರಾಮ ಶಿಶುವಾಟಿಕ” ವಿಭಾಗ ಮತ್ತು ಅದರ ನೂತನ ತರಗತಿಗಳ ಉದ್ಘಾಟನೆ ಹಾಗೂ 2026 -27ನೇ ಶೈಕ್ಷಣಿಕ ವರ್ಷಕ್ಕೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮವು ಶಂಕರಾಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಐಎಸ್.ಎಸ್.ಎ.ಆರ್. ಫೈನಾನ್ಸಿಯಲ್ ಸರ್ವಿಸ್ ಮುಂಬೈ ಇದರ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಡಾ. ಆರ್ .ಕೆ‌. ಶೆಟ್ಟಿ, ಮುಂಬೈ ಅವರು ಶ್ರೀರಾಮ ಶಿಶುವಾಟಿಕ ವಿಭಾಗ ಮತ್ತು ಕಟ್ಟಡವನ್ನು ಉದ್ಘಾಟಿಸಿ
ಮಾತನಾಡಿ “ನಮ್ಮ ಭಾಷೆ,ಕಲೆ, ಸಂಸ್ಕೃತಿಯನ್ನು ಕಲಿತರೆ ದೇಶ ಪ್ರಗತಿಯತ್ತ ಸಾಗುತ್ತದೆ “ಎಂದರು.

ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕರು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಶ್ರೇಷ್ಠತೆಯ ಕಡೆಗೆ ನಡೆಯಬೇಕಾದರೆ ಹಿರಿಯರ ಕೊಡುಗೆಯನ್ನು ಸ್ಮರಿಸಿ, ಮಕ್ಕಳು ಅದನ್ನು ಬೆಳೆಸಿಕೊಂಡು ಬರಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು  ಪ್ರಗತಿ ಹಾಸ್ಪಿಟಲ್ ಪುತ್ತೂರು ಇಲ್ಲಿನ ಆಯುರ್ವೇದ ತಜ್ಞರಾದ ಡಾ. ಸುಧಾ ರಾವ್ ಬಂಗಾರಡ್ಕ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ನಮ್ಮೊಂದಿಗೆ ಎಲ್ಲರನ್ನೂ ಕರೆದುಕೊಂಡು ಹೋಗುವ ಮಾನವೀಯತೆ  ನಮ್ಮಲ್ಲಿರಬೇಕು ಎಂದರು.

ಪುತ್ತೂರು ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಆಡಳಿತ ಪಾಲುದಾರರಾದ  ಲಕ್ಷ್ಮಿಕಾಂತ್ ಆಚಾರ್ಯ, ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ  ವೇದಲಕ್ಷ್ಮಿ ಕಾಂತ್ಆಚಾರ್ಯ, ಮಂಗಳೂರು ರೈಸ್ ಸ್ಪೈಸಸ್ ನ ಮಾಲಕರಾದದಿವ್ಯಾ ಸೋಹನ್ ರೈ, ಉಪ್ಪಿನಂಗಡಿ ರಾಜ್ ಗ್ರೂಪ್  ಸಂಸ್ಥಾಪಕರಾದ  ಕೃಷ್ಣ ರಾಜ್ , ಶ್ರೀರಾಮ ವಿದ್ಯಾ ಕೇಂದ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಬಿ .ನಾರಾಯಣ ಸೋಮಯಾಜಿ, ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕರಾದ  ವಸಂತ ಮಾಧವ , ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ ಶ್ರೀ ಕೃಷ್ಣಪ್ರಸಾದ್ ಕಾಯರ್ ಕಟ್ಟೆ,  ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ  ತಿರುಮಲೇಶ್ವರ ಪ್ರಶಾಂತ್ ರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ವೈಷ್ಣವಿ ಕಡ್ಯ ಸ್ವಾಗತಿಸಿದರು , ವೈಷ್ಣವಿ ಕಾಮತ್ ವಂದಿಸಿದರು
ಕು. ಸೃಜನ ನಿರೂಪಿಸಿದರು.  

By Suddi9

Leave a Reply

Your email address will not be published. Required fields are marked *