ಬಿ.ಸಿ.ರೋಡ್ : ಇಲ್ಲಿನ ಅಜ್ಜಿಬೆಟ್ಡು ಬಳಿಯ ಅಕ್ಕಮಹಾದೇವಿ ಶಿಶುಮಂದಿರದಲ್ಲಿ 2026-27ನೇ ಶೈಕ್ಷಣಿಕ ವರ್ಷದ ಶಿಶುಮಂದಿರ ಪ್ರಾರಂಭೋತ್ಸವ ಹಾಗೂ ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5ರಂದು ಆಚರಿಸಲಾಯಿತು.
ಕಾರ್ಯಕ್ರಮವನ್ನು ಆಡಳಿತ ಮಂಡಳಿಯ ಸದಸ್ಯರು ದೀಪ ಬೆಳಗಿಸಿ ಹಾಗೂ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಕ್ಕಳು ಮತ್ತು ಪಾಲಕರು ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆಡಳಿತ ಮಂಡಳಿಯ ಸದಸ್ಯೆ ಅನಿತಾ ನಾಯಕ್ ಹಾಗೂ ವಿದ್ಯಾವತಿ ಅವರು ಮಕ್ಕಳಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ, ಸಿಹಿ ನೀಡಿ ಹೊಸ ಶೈಕ್ಷಣಿಕ ವರ್ಷದ ಶುಭಾರಂಭಕ್ಕೆ ಸ್ವಾಗತ ಕೋರಿದರು.
ವಿಶ್ವ ಪರಿಸರ ದಿನದ ಅಂಗವಾಗಿ ಮಕ್ಕಳು ಹಾಗೂ ಪಾಲಕರು ಒಟ್ಟಾಗಿ ಗಿಡ ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾತಿಥಿಯಾಗಿ ಲಕ್ಷ್ಮಣ್ ಅಗ್ರಬೈಲು ಅವರು ಪರಿಸರದ ಮಹತ್ವ ಹಾಗೂ ಶಿಶುಮಂದಿರದಲ್ಲಿ ನಡೆಯುವ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

By suddi9

Leave a Reply

Your email address will not be published. Required fields are marked *