ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಪ್ರೌಢಶಾಲೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆಯನ್ನು ಅಚಾರಿಸಲಾಯಿತು.ಮುಖ್ಯ ಅತಿಥಿಯಗಿ ಭಾಗವಹಿಸೊದ್ದ ಮಂಗಳೂರು ಗ್ರಾಮಾಂತರ ಜಿಲ್ಲಾ ಪರ್ಯಾವರಣ ಸಂಯೋಜಕರಾದ  ಕಮಲಾಕ್ಷ ಶಂಭೂರು ಅವರು ಮಾತನಾಡಿ, “ಪರಿಸರ ದಿನವನ್ನು ಕೇವಲ ಒಂದು ದಿನಕ್ಕೆ ಮೀಸಲಿಡದೆ ಪ್ರತಿದಿನವೂ ಪರಿಸರವನ್ನು ಉಳಿಸಿ,ಬೆಳೆಸುವ ಪ್ರಯತ್ನವನ್ನು ಮಾಡಬೇಕೆಂದು”  ತಿಳಿಸಿದರು
ಪ್ರೌಢಶಾಲಾ ಮುಖ್ಯ ಗುರುಗಳಾದ ಗೋಪಾಲ್ ಶ್ರೀಮಾನ್  ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧಾತ್ರಿ ಪರಿಸರ ಗೀತೆಯನ್ನು ಹಾಡಿದಳು , ಪರಿಸರ ದಿನಾಚರಣೆಯ ಅಂಗವಾಗಿ ನಡೆಸಿದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.  ಬಿನೀತ್ ವಿಶ್ವ ಪರಿಸರ ದಿನಾಚರಣೆಯ ಮಹತ್ವವನ್ನು ತಿಳಿಸಿದನು. ಪರಿಸರಕ್ಕೆ ಸಂಬಂಧಿಸಿದ ಘೋಷಣೆಯನ್ನು  ಜಿನ್ನಪ್ಪ ಶ್ರೀಮಾನ್ ಅವರು ವಿದ್ಯಾರ್ಥಿಗಳಿಂದ ಹೇಳಿಸಿದರು. ರಾಜೇಶ್ವರಿ ಸ್ವಾಗತಿಸಿ, ವಂದಿಸಿದಳು. ಸಂಜಯ್ ಕಾರ್ಯಕ್ರನ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *