ಬಂಟ್ವಾಳ ತಾಲೂಕಿನ ಅಮುಂಜೆ ಗುತ್ತು ಕುಟುಂಬಿಕರು ಆರಾಧಿಸಿಕೊಂಡು ಬಂದಿರುವ ಶ್ರೀ ಧೂಮಾವತಿ ಬಂಟ ದೈವಗಳ ವಾರ್ಷಿಕ ನೇಮೋತ್ಸವ ಮೇ. 23 ರಂದು ಶನಿವಾರ ಅಮ್ಮುoಜೆ ಕಣಿಯೂರು ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಧೂಮಾವತಿ ದೈವಕ್ಕೆ ನೂತನ ಬಂಡಿ ಸಮರ್ಪಿಸಲಾಯಿತು.

ಅಮ್ಮುoಜೆಗುತ್ತು ಡಾ.ಎ.ಮಂಜಯ್ಯ ಶೆಟ್ಟಿ ಹಾಗೂ ಅಮ್ಮುಂಜೆಗುತ್ತು ಕುಟುಂಬಿಕರು ದೈವಗಳ ನೇಮೋತ್ಸವದಲ್ಲಿ ಪಾಲ್ಗೊಂಡು ಗಂಧಪ್ರಸಾದ ಸ್ವೀಕರಿಸಿದರು. ದೈವಸ್ಥಾನದ ಒಳ ಅಂಗಣಕ್ಕೆ ಇಂಟರ್ಲಾಕ್, ವಿದ್ಯುತ್ ಸಂಪರ್ಕ, ಗುಡಿ ಗೋಪುರಕ್ಕೆ ಬಣ್ಣ ಹಾಗೂ ನೂತನ ಬಂಡಿ ನಿರ್ಮಾಣ ಕಾರ್ಯಗಳನ್ನು ಮಾಡಿ ಗಣಹೋಮ , ನವಕ ಕಲಶ ರಾತ್ರಿ ವಾರ್ಷಿಕ ನೇಮೋತ್ಸವ ನಡೆಯಿತು. ಪೂಜಾ ವಿಧಿ ವಿಧಾನಗಳನ್ನು ಪೊಳಲಿ ಶ್ರೀಕಾತ್ ಮಯ್ಯ ನೇತೃತ್ವದಲ್ಲಿ ನಡೆಯಿತು.

