ಬಂಟ್ವಾಳ: ನಾರಿಶಕ್ತಿವಂದನ್ ಅಧಿನಿಯಮ- 2023 ರ ಕಾಯಿದೆಯನ್ನು ಕೂಡಲೇ ಜಾರಿಗೊಳಿಸುವಂತೆ ದ.ಕ.ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಮಹಮ್ಮದ್‌ ಆಲಿ ಅವರು ಒತ್ತಾಯಿಸಿದ್ದಾರೆ.
ಬುಧವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಹಿಳಾ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯು ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ ಯಾವತ್ರೂ ಮಹಿಳೆಯರ ಪರವಾಗಿದ್ದು, ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ನ ಆಡಳೊತಾವಧಿಯಲ್ಲಿ ಮಹಿಳೆಯರ ಪರವಾದ ಹಲವಾರು ಕಾರ್ಯಕ್ರಮ,ಯೋಜನೆಯನ್ನು ಜಾರಿಗೆ ತಂದಿದೆ ಎಂದರು‌

ಗುಜರಾತ್, ಮಣಿಪುರ ಸಹಿತ ನಾನಾ ಕಡೆಗಳಲ್ಲಿ ಮಹಿಳೆಯರಿಗೆ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಆರೋಪಿಗಳ ಕೃತ್ಯ ಖಂಡಿಸುವ ಪ್ರಯತ್ನವನ್ನು ಬಿಜೆಪಿ ಮಾಡಿರಲಿಲ್ಲ ಎಂದರು.

 ಕಾಂಗ್ರೆಸ್ ಸರಕಾರ ದ.ಕ.ಜಿಲ್ಲೆಯ ಆರ್ಹ ಮಹಿಳೆಯರನ್ನು ಗುರುತಿಸಿ ವಿವಿಧ ನಿಗಮಗಳಲ್ಲಿ ಸ್ಥಾನಮಾನವನ್ನು ನೀಡಿದೆಯಲ್ಲದೆ ಗೃಹಲಕ್ಷ್ಮೀ,ಶಕ್ತಿಯೋಜನೆಯನ್ನು ಜಾರಿಗೆ ತಂದಿದೆ ಎಂದರು.
ಬಿಜೆಪಿಗೆ ಮಹಿಳೆಯರ ಕುರಿತು ಎಳ್ಳಷ್ಟೂ ಗೌರವವಿಲ್ಲ ಆದರೆ ಕಾಂಗ್ರೆಸ್ ಸದಾ ಕಾಲ ಮಹಿಳೆಯರ ಪರ ಇತ್ತು ಎಂದ ಅವರು, ಕಾಂಗ್ರೆಸ್ ಮಸೂದೆ ಮಂಡಿಸಿದಾಗ ಅಡ್ಡಿಪಡಿಸಲಾಯಿತು, 2023ರಲ್ಲಿ ಮೋದಿ ಸರಕಾರ ನಾರಿಶಕ್ತಿ ವಂದನ್ ಅಧಿನಿಯಮ ಜಾರಿಗೊಳಿಸಿದಾಗ ಕಾಂಗ್ರೆಸ್ ಬೆಂಬಲಿಸಿತ್ತು, ಇದನ್ನೇ ಎರಡು ವರ್ಷದ ಬಳಿಕ ಪುನರ್ ಮಂಡನೆ ಮಾಡಿ, ಕ್ಷೇತ್ರ ಪುನರ್ವಿಂಗಡಣೆ ಮಾಡುವ ಹುನ್ನಾರವಾಗಿದ್ದ ಕಾರಣ ಮಸೂದೆ ಬಿದ್ದು ಹೋಯಿತು ಎಂದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಬಾಲಕೃಷ್ಣ ಅಂಚನ್, ಬಂಟ್ವಾಳ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ಬಂಟ್ವಾಳ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಲಾದ್ರು ಮಿನೇಜಸ್, ಪಾಣೆಮಂಗಳೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಎ.ಬಿ.ಅಬ್ದುಲ್ಲಾ ಕೊಳ್ಳಾಡು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *