ಬಂಟ್ವಾಳ: ಸೋಮನಾಥ ಉಳಿಯ ಮತ್ತು ಉಳ್ಳಾಲ ಉಳಿಯ ಕ್ಷೇತ್ರಗಳಿಗೆ ಅವಿನಾಭಾವ ಸಂಬಂಧವಿದ್ದು,ಗಾಳದ ಕೊಂಕಣಿ ಸಣ್ಣ ಸಮುದಾಯ ದೇವರ ಮೇಲಿನ ಭಕ್ತಿ, ಶೃದ್ಧೆ, ನಂಬಿಕೆಯ ಪ್ರತೀಕವಾಗಿ ದೇವಸ್ಥಾನ ನಿರ್ಮಾಣದಂತ ದೊಡ್ಡ ಕಾರ್ಯ ಸಾಧನೆ ಮಾಡಿ ತೋರಿಸಿದೆ, ಉಳ್ಳಾಲ ಉಳಿಯ ಕ್ಷೇತ್ರಕ್ಕು ಈ ಸಮಾಜದ ಕೊಡುಗೆಯು ಅಪಾರವಾಗಿದೆ ಎಂದು ಉಳ್ಳಾಲ ಉಳಿಯ ಶ್ರೀ ಧರ್ಮ ಅರಸು ಕ್ಷೇತ್ರದ ಧರ್ಮಧರ್ಶಿ ಶ್ರೀ ದೇವು ಮೂಲ್ಯಣ್ಣ ನುಡಿದರು.
ಮುನ್ನೂರು ಗ್ರಾಮದ ಶ್ರೀ ಕೇತ್ರ ಸೋಮನಾಥ ಉಳಿಯದ ಶ್ರೀ ಸೋಮೇಶ್ವರೀ ದೇವಸ್ಥಾನ,ಶ್ರೀನಾಗದೇವರು ಹಾಗೂ ಶ್ರೀ ಅರಸು,ಧೂಮಾವತಿ ಬಂಟ ಮತ್ತು ಪರಿವಾರ ದೈವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಂಗಳವಾರ ರಾತ್ರಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಆಶೀರ್ವಚನಗೈದರು.

ಇಡೀ ಭಾರತ ದೇಶ ಹಿಂದುತ್ವದ ಭಾವನೆ ಮೂಡುತ್ತಿದ್ದು,ಭಾರತೀಯತೆ,ಸನಾತನ ಹಿಂದೂ ಧರ್ಮ,ನಮ್ಮ ಸಂಸ್ಖೃತಿ ಇಂತಹ ಧಾರ್ಮಿಕ ಕೇಂದ್ರದಿಂದ ಮಾತ್ರ ಉಳಿಯಲು ಸಾಧ್ಯ ಎಂದ ಅವರು ಯಾವುದೇ ಒಂದು ಗ್ರಾಮದ ಕ್ಷೇತ್ರ ಅಭಿವೃದ್ಧಿಯಾದಾಗ ಇಡೀ ಊರೇ ಅಭಿವೃದ್ಧಿಯಾದಂತೆ ಎಂದರು.
ಈ ಸಂದರ್ಭಸೋಮನಾಥ ಉಳಿಯ ಕ್ಷೇತ್ರದ ತಂತ್ರಿವರ್ಯರಾದ ಕುಂಟಾರು ರವೀಶ್ ತಂತ್ರಿಯವರು ಧಾರ್ಮಿಕ ಉಪನ್ಯಾಸಗೈದು ಸ್ವಾರ್ಥಕ್ಕಾಗಿ ದೇವರ ಮುಂದೆ ಪ್ರಾರ್ಥನೆ ಸಲ್ಲದು, ಭಗವಂತ ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮಜೀವನವನ್ನು ಸಾರ್ಥಕ್ಯಗೊಳಿಸಬೇಕು ಎಂದರು.
ಒಳ್ಳೆಯ ಕೆಲಸಗಳನ್ನು ಮಾಡುವಾಗ ಸಮಾಜದಲ್ಲಿ ಟೀಕೆಗಳು ಸಹಜ,ಅವುಗಳನ್ನೆಲ್ಲಾ ಮೆಟ್ಟಿ ನಿಂತು ಸಮಾಜದ ಕಾರ್ಯದಲ್ಲಿ ನಿರಂತರವಾಗಿತೊಡಗಿಸಬೇಕು ಎಂದ ಅವರು ಧರ್ಮದ ಮರ್ಮ ವನ್ನು ಅರಿತುಕೊಂಡು ಮುಂದುವರಿಯಬೇಕು ಎಂದರು.
ಪ್ರಸಕ್ತ ಕಾಲಘಟ್ಟದಲ್ಲಿ ಸಮಸ್ತ ಹಿಂದೂ ಸಮಾಜ ಒಗ್ಗಟ್ಟಾಗುವ ಅನೀವಾರ್ಯತೆ ಇದೆ.ದೇವರೇ ಎಲ್ಲದಕ್ಕು ಪ್ರರೇಣಾದಾಯಿಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ
ತಾರನಾಥ ಗಟ್ಟಿ ಮಾತನಾಡಿ,ಸಜ್ಜನ ವ್ಯಕ್ತಿಗಳ ಮೂಲಕ ದೇವರನ್ನು ಕಾಣಲು ಸಾಧ್ಯ,ತಮ್ಮ ಮಕ್ಕಳನ್ನು ಸಚ್ಚಾರಿತ್ರ್ಯದ ದಾರಿಯಲ್ಲಿ ಮುನ್ನಡೆಯುವ ನಿಟ್ಟಿನಲ್ಲಿ ಹೆತ್ತವರು ನಿಗಾ ವಹಿಸಬೇಕು ಎಂದರು.
ಕ್ಷೇತ್ರದ ಗಡಿಪ್ರಧಾನರಾದ ಬಸಪ್ಪ ಯಾನೆ ಜೆ.ರವೀಂದ್ರನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಬೋಳಾರ ಮಾರಿಗುಡಿ ದೇವಳದ ಮಾಜಿ ಆಡಳಿತ ಟ್ರಸ್ಟಿ ಲಯನ್ ತಾರನಾಥ ಶೆಟ್ಟಿ,ಕುಲಪುರೋಹಿತರಾದ ಪ್ರಶಾಂತ್ ಉಡುಪ ಅಂಬ್ಲಮೊಗರು,ಶ್ರೀಅರಸು,ಧೂಮಾವತಿ ಬಂಟ ದೈವಸ್ಥಾನದ ಅರ್ಚಕರಾದ ಪ್ರಕಾಶ್ ಮೂಲ್ಯಣ್ಣ,ಸಹ ಅರ್ಚಕರಾದ ವಿನೋದ್ ಗುರಿಕಾರ,ಸಮುದಾಯದ ಹಿರಿಯರಾದ ಸುರೇಂದ್ರನಾಯಕ್ ಕಾಪಿಕಾಡ್,ಕ್ಷೇತ್ರದ ಆಡಳಿತ ಸಮಿತಿ ಗೌರವಾಧ್ಯಕ್ಷ ಯು.ದಯಾನಂದ ನಾಯಕ್,ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ ವೇದಿಕೆಯಲ್ಲಿದ್ದರು.
ದೇವಳದ ಆಡಳಿತ ಸಮಿತಿಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ ಪ್ರಸ್ತಾವನೆಗೈದರು.ಪ್ರ.ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ಸ್ವಾಗತಿಸಿದರು.ಜತೆಕಾರ್ಯದರ್ಶಿ ಆಶಾ ಎಸ್.ನಾಯಕ್ ವಂದಿಸಿದರು.ಪ್ರಕಾಶ್ ಪುತ್ತೂರು ನಿರೂಪಿಸಿದರು.

