ಬಂಟ್ವಾಳ: ಇಲ್ಲಿನ ಕುದನೆ ವಾಸುಕೀವನಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ”ಶ್ರೀ ನರಸಿಂಹ ಜಯಂತಿ ಸಂಭ್ರಮದಿಂದ ನೆರವೇರಿತು.ಬೆಳಿಗ್ಗೆ”ಶ್ರೀನರಸಿಂಹಮಹಾಮಂತ್ರಹವನ”,ಆರಂಭಗೊಂಡುಮಧ್ಯಾಹ್ನಯಜ್ಞದಪೂರ್ಣಾಹುತಿ,ಮಹಾಪೂಜೆಯಾದ ಬಳಿಕ ಅನ್ನಸಂತರ್ಪಣೆಯ ನಡೆಯಿತು,

ಮಧ್ಯಾಹ್ನದ ನಂತರ ಗ್ರಾಮ ದೈವ ಅಣ್ಣಪ್ಪಪಂಜುರ್ಲಿಗೆ ನೇಮೋತ್ಸವ,ಸಂಜೆ
ಕ್ಷೇತ್ರದ ಪರಿವಾರ ದೈವಗಳಾದ ರಕೇಶ್ವರಿ, ಮೈಸಂದಾಯ,ಕಲ್ಲುರ್ಟಿ, ಪಂಜುರ್ಲಿ ದೈವಗಳಿಗೆ ಗಗ್ಗರಸೇವೆ ನಡೆಯಿತು.ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವಾರು ಗಣ್ಯರು,ಸ್ಥಳೀಯ ಪ್ರಮುಖರು ಅಗಮಿಸಿ ದೈವ,ದೇವರ ಪ್ರಸಾದ ಸ್ವೀಕರಿಸಿದರು.
