ಬಂಟ್ವಾಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮುಲ್ಕಿ ತಾಲೂಕು ಘಟಕದ ವತಿಯಿಂದ ಕಾರ್ನಾಡು ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ‘ದ.ಕ. ಜಿಲ್ಲಾಮಟ್ಟದ ಸೌಹಾರ್ದ ಕ್ರೀಡಾಕೂಟ ಪಂಚಾಯತ್ ರಾಜ್ ಟ್ರೋಫಿ – 2026’ ರಲ್ಲಿ ಬಂಟ್ವಾಳ ತಾಲೂಕು ತಂಡವು ಗಮನಾರ್ಹ ಸಾಧನೆ ಮಾಡಿದೆ.

ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಅವರ ನೇತೃತ್ವದ ‘ಟೀಂ ಬಂಟ್ವಾಳ’ ಕ್ರಿಕೆಟ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಲೀಗ್ ಪಂದ್ಯಗಳಲ್ಲಿ ಕಡೇಶ್ವಾಲ್ಯ ಗ್ರಾಮ ಪಂಚಾಯತ್ ಸಿಬ್ಬಂದಿ ನಾಗರಾಜ್ ಮತ್ತು ವೀರಕಂಭ ಗ್ರಾಮ ಪಂಚಾಯತ್ ಸಿಬ್ಬಂದಿ ಮಿಥುನ್ ಅವರು ‘ಪಂದ್ಯಶ್ರೇಷ್ಠ’ ಪ್ರಶಸ್ತಿಯನ್ನು ಪಡೆದರೆ,ಬಂಟ್ವಾಳ ತಾಲೂಕು ಪಂಚಾಯತ್ ನರೇಗಾ ಎಂಐಎಸ್ ಸಂಯೋಜಕ ಜೋಯಲ್ ಡಿಸೋಜ ಅವರು ‘ಅತ್ಯುತ್ತಮ ಬೌಲರ್’ ಪ್ರಶಸ್ತಿ ಮುಡಿಗೇರಿಸಿದರು.ಹಗ್ಗಜಗ್ಗಾಟದಲ್ಲಿ ಚಾಂಪಿಯನ್:ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಂಟ್ವಾಳ ತಂಡವು ಅಪ್ರತಿಮ ಸಾಮರ್ಥ್ಯ ತೋರಿ ಪ್ರಥಮ ಸ್ಥಾನವನ್ನು ಪಡೆಯಿತು.
