ಬಂಟ್ವಾಳ : ಸಮಾಜ ವೇಗವಾಗಿ ಬೆಳೆಯುತ್ತಿದ್ದು ನಾವು ಪರಿವರ್ತನ ಕಾಲಘಟ್ಟದಲ್ಲಿದ್ದೇವೆ, ಸಂಘ ಸಂಸ್ಥೆಗಳು ಬಡವರು, ದುರ್ಬಲರಿಗೆ ಸಹಕಾರ ನೀಡುವುದರೊಂದಿಗೆ ಅವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು,ಸಮಾಜದಲ್ಲಿ ಎಲ್ಲಾ ವರ್ಗದ ಜನರು ಬಲಿಷ್ಠರಾದರೆ ಮಾತ್ರ ದೇಶ ಸದೃಢವಾಗುತ್ತದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.ಬಂಟ್ಚಾಳ ತಾಲೂಕಿನ ಕಳ್ಳಿಗೆ ಗ್ರಾಮದದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆದ ಕಳ್ಳಿಗೆಯುವಕರ ಸಂಘ ಮತ್ತು ಮಹಿಳಾ ಸಂಘದ 42ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಕನಪಾಡಿ ಕನಪಾಡಿತ್ತಾಯ ದೈವದ ಪಾತ್ರಿ ಧೂಮ ಮೂಲ್ಯ ಇವರು ದೀಪಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಾಜಿ ಜಿ ಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಉದ್ಯಮಿ ಭುವನೇಶ್ ಪಚ್ಚಿನಡ್ಕ, ಕರಿಯಂಗಳ ಗ್ರಾ ಪಂ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಜ್ಯೋತಿಷಿ ಅನಿಲ್ ಪಂಡಿತ್, ನಿವೃತ್ತ ಸೈನಿಕ ಹರೀಶ್ ಡಿ. ಬಂಟ್ವಾಳ ಅತಿಥಿಗಳಾಗಿ ಭಾಗವಹಿಸಿ ಶುಭಹಾರೈಸಿದರು.
ದೇವಂದಬೆಟ್ಟುಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಿವರಾಮ ಶಿಬಿರಾಯ ,ದೇವಳದ ವ್ಯವಸ್ಥಾಪನಾ ಸಮಿತಿ ಕೋಶಾಧಿಕಾರಿ ಗಣೇಶ ಜಿ ಕರ್ಕೇರ, ಸಮಾಜ ಸೇವಕಿ ಪ್ರಿಯದರ್ಶಿನಿ ದರಿಬಾಗಿಲು, ವಿನೋದ ಗಿರಿಯಪ್ಪ ಬದ್ಯಾರು,ಯುವಕ ಸಂಘದ ಅಧ್ಯಕ್ಷ ಶಶಿಧರ ಕನಪಾಡಿ, ಮಹಿಳಾ ಮಂಡಲದ ಅಧ್ಯಕ್ಷೆ ಸುಜಿತಾ ದೇವಂದಬೆಟ್ಟು, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಮನೋಜ್ ಕನಪಾಡಿ, ಸುಧೀರ್ ಕುಮಾರ್ ಜಾರಂದಗುಡ್ಡೆ, ಮಲ್ಲಿಕಾ ಜ್ಯೋತಿಗುಡ್ಡೆ,ದಕ್ಷಿಣ್ ದೇವಂದಬೆಟ್ಟು,ಯಶ್ವಿನಿ ಜಾರಂದಗುಡ್ಡೆ,ಸಾನಿಕಾ ಕಂಜತ್ತೂರು, ಇವರನ್ನು ಅಭಿನಂದಿಸಲಾಯಿತು.
ಕ್ರೀಡಾ ಸಾಧನೆಗಾಗಿ ಇಶಾ ಅನ್ವಿ ಇವರನ್ನು ಸನ್ಮಾನಿಸಲಾಯಿತು.
ಯುವಕ ಸಂಘದ ಮಾಜಿ ಅಧ್ಯಕ್ಷ ಜಗದೀಶ ಕಂಜತ್ತೂರು ಪ್ರಸ್ತಾವನೆಗೈದರು.ಚಂದ್ರಹಾಸ ದೇವಂದಬೆಟ್ಟು ಸ್ವಾಗತಿಸಿ,ಪ್ರಶಾಂತ್ ಕನಪಾಡಿ ವಂದಿಸಿದರು, ಮನೋಜ್ ಕನಪಾಡಿ ಹಾಗೂ ಸೌಮ್ಯ ಮನೋಜ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿದ್ಯ,ಜಾದೂ ಪ್ರದರ್ಶನ, ನಾಟಕ ಪ್ರದರ್ಶನ ಜರುಗಿತು.
