ಬಂಟ್ವಾಳ: ದೇಶದಲ್ಲಿ ಮಹಿಳಾ ಶಕ್ತಿಗೆ ಬಲ ತುಂಬುವ ಮೂಲಕ ರಾಜಕೀಯ ರಂಗದಲ್ಲಿಯೂ ನಾರೀ ಶಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದರೊಂದಿಗೆ ನಾಗರಿಕ ಸಮಾಜ ಬಲವರ್ದನೆಗೆ ಪೂರಕವಾಗಿ
ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಶೇ 33% ಮೀಸಲಾತಿ ನೀಡವುದರಿಂದ ಸಾಧ್ಯ ಎಂದು ಮನಗಂಡಿರುವ ನರೇಂದ್ರ ಮೋದಿಜೀ ನೇತೃತ್ವದ ಕೇಂದ್ರ ಸರ್ಕಾರ ನಾರೀ ಶಕ್ತಿ ವಂದನಾ ಮಸೂದೆ ಜಾರಿಗೆ ಕಾಂಗ್ರೆಸ್ ಪಕ್ಷದ ಪ್ರತಿರೋಧದಿಂದಾಗಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲು ದೇಶದ ಮಹಿಳಾ ಸಮುದಾಯದ ರಾಜಕೀಯ ಅಶೋತ್ತರಗಳಿಗೆ ಆಗಿರುವ ಸೋಲಾಗಿದೆ ಎಂದು ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಮಹಿಳಾ ಮತದಾರರು ಮುಂದಿನ ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿರುವ ಅವರು ಸಂವಿಧಾನ ಶಿಲ್ಪಿ ಡಾ ಬಿ. ಆರ್. ಅಂಬೇಡ್ಕರ್ ರವರು ಈ ಹಿಂದೆ ಮಹಿಳಾ ಸಮಾನತೆಗಾಗಿ ಹಿಂದೂ ಕೋಡ್ ಬಿಲ್ ಮಂಡಿಸಲು ಪ್ರಯತ್ನಿಸಿದಾಗಲೂ ಕಾಂಗ್ರೆಸ್ ಪಕ್ಷ ಅಡ್ಡಿ ಪಡಿಸಿತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಶಕ್ತಿಗೆ ಬಲ ತುಂಬಲು ಮಂಡಿಸಿದ ಮಸೂದೆಗೂ ಕಾಂಗ್ರೆಸ್ ಪಕ್ಷ ತಡೆ ಒಡ್ಡಿರುವುದು ಕಾಂಗ್ರೆಸ್ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳ ನಿಜ ಬಣ್ಣ ಬಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನಾದರೂ ಜನ ಅರ್ಥ ಮಾಡಿಕೊಳ್ಳಬೇಕು.ಪ್ರಜಾಪ್ರಭುತ್ವ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ನೀತಿಯ ಮೂಲಕ ಮಹಿಳೆಯರಿಗೆ ಮಾಡಿದ ದ್ರೋಹ ಖಂಡನೀಯವಾಗಿದೆ ಎಂದು ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
