ಬಂಟ್ವಾಳ : ಅರಣ್ಯ ಸುಸ್ಥಿರ,ಅರಣ್ಯ ನಿರ್ವಹಣೆ ಮತ್ತು ಜೀವ ವೈವಿಧ್ಯ ಸಂರಕ್ಷಣಾ ಯೋಜನೆಯಲ್ಲಿ ಸ್ಥಾಪಿಸಲಾದ “ವೀರಕಂಭ ಗ್ರಾಮ ಅರಣ್ಯ ಸಮಿತಿ” ಯ ಹೊಸ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಮುಂದಿನ ಐದು ವರ್ಷಗಳ ಕಾಲಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಗಿದೆ.
2026- 2031 ರ ಸಾಲಿನ ನೂತನ  ಅಧ್ಯಕ್ಷರಾಗಿ ವಿಶ್ವನಾಥ ಎಂ. ಅವರು ಪುನರಾಯ್ಕೆಯಾಗಿದ್ದಾರೆ. 

ಸಮಿತಿ ಸದಸ್ಯರಾಗಿಎಂ.ಆರ್.ನೋಣಯ್ಯ, ರೇವತಿ, ಅಬ್ದುಲ್ ಖಾದರ್, ಮೀನಾಕ್ಷಿ, ಸಂತೋಷ್ ಕಲ್ಮಲೆ, ಬೇಬಿ ಜೆ.ಆಳ್ವ, ಚಂದ್ರಶೇಖರ ಬಂಗೇರ,ಜಯಪ್ರಸಾದ್ ಶೆಟ್ಟಿ, ಗಿರಿಜಾ,ತೇಜಾಕ್ಷಿ ಅವರು ಆಯ್ಕೆಯಾಗಿದ್ದಾರೆ.
‌‌ ವಿಟ್ಲ ಕಂದಾಯ ನಿರೀಕ್ಷಕ ಎಂ.ಎನ್.ರವಿ ಚುನಾವಣಾಧಿಕಾರಿಯಾಗಿ  ಪ್ರಕ್ರಿಯೆ ನಡೆಸಿದರು.ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ರವಿರಾಜ್ ಬಿ. ಗಸ್ತು ಅರಣ್ಯ ಪಾಲಕರಾದ ಶೋಭಿತ್ ಕುಮಾರ್,ದಯಾನಂದ, ರಾಘವೇಂದ್ರ, ಅರಣ್ಯ ವೀಕ್ಷಕರಾದ ಕಿರಣ್,ಪ್ರವೀಣ್ ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *