ಬಂಟ್ವಾಳ: ದ.ಕ.ಲೋಕಸಭಾ ಕ್ಷೇತ್ರದ ಸದಸ್ಯ ಕ್ಯಾ.ಬ್ರಿಜೇಶ್ ಚೌಟ ಅವರು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರನ್ನು ಶುಕ್ರವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು.

ಕನ್ಯಾಡಿ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಾಸ್ ಅಗುತ್ತಿದ್ದ ವೇಳೆ ಸಂಸದ ಕ್ಯಾ .ಬ್ರಿಜೇಶ್ ಚೌಟ ಅವರು ಬಿ.ಸಿ.ರೋಡಿನ ಬಸ್ತಿಪಡ್ಪವಿನ ಚೆನ್ನಮ್ಮಕುಟೀರದಲ್ಲಿರುವ ಪೂಜಾರಿಯವರ ಮನೆಗೆ ತೆರಳಿ ಅವರು ಆರೋಗ್ಯವನ್ನು ವಿಚಾರಿಸಿದರು.
ಸಂಸದರಾಗಿ ಕಾರ್ಯಶೈಲಿಯ ಕುರಿತು ಮಾಹಿತಿ ಪಡೆದುಕೊಂಡ ಪೂಜಾರಿಯವರು ಉತ್ತಮವಾಗಿ ಕೆಲಸ ಮಾಡುವಂತೆ ಶುಭಹಾರೈಸಿದರು.ಸುಮಾರು ಆರ್ದತಾಸುಗಳ ಕಾಲ ಉಭಯ ನಾಯಕರು ಕುಶಲೋಪಚರಿ ನಡೆಸಿದರು.

By suddi9

Leave a Reply

Your email address will not be published. Required fields are marked *