ಬಂಟ್ವಾಳ: ಸಜೀಪ ಮುನ್ನೂರು ಗ್ರಾಮದ ಮುಗುಳಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ  ವಾರ್ಷಿಕೋತ್ಸವ ಹಾಗೂ ಕೆನರಾ ಬ್ಯಾಂಕ್ ವತಿಯಿಂದ ದೇವಳಕ್ಕೆ ಕೊಡುಗೆಯಾಗಿ ನೀಡಲಾದ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಸೋಲಾರ್ ದೀಪವನ್ನು ಉದ್ಘಾಟಿಸಲಾಯಿತು.

ವಾರ್ಷಿಕೋತ್ಸವದ ಅಂಗವಾಗಿ ಸಜೀಪ ಮಾಗಣೆತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಶ್ರೀದೇವರಿಗೆ ಪುಣ್ಯಾಹ, ಗಣಯಾಗ, ಪವಮಾನ ಸೂಕ್ತ ಅಭಿಷೇಕ, ಫಲಪಂಚಾಮೃತ ಅಭಿಷೇಕ, ನಾಗದೇವರಿಗೆ ಸಯಸಾಸ್ತರ, ದೇವರಿಗೆ ವಿಶೇಷ ಪೂಜೆ, ಭಜನಾ ಸಂಕೀರ್ತನೆ, ಸಾಮೂಹಿಕ ಸತ್ಯನಾರಾಯಣ ಪೂಜೆ ಅನ್ನದಾನ, ಅಶ್ವಥಕಟ್ಟೆ ವೃಕ್ಷಪೂಜೆ,  ಭರತನಾಟ್ಯ ಕಾರ್ಯಕ್ರಮ,ದೇವರಿಗೆ ರಂಗ ಪೂಜೆಯೊಂದಿಗೆ ಸಂಪನ್ನಗೊಂಡಿತು.

ಇದೇ ವೇಳೆ ಕೆನರಾ ಬ್ಯಾಂಕ್ ವತಿಯಿಂದ ದೇವಳಕ್ಕೆನೀಡಿದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸೋಲಾರ್ ದೀಪವನ್ನು ಉದ್ಘಾಟಿಸಲಾಯಿತು.ಸುಮಾರು ಒಂದುವರೆ ಕೋಟಿ ರೂ. ವೆಚ್ಚದಲ್ಲಿ ದೇವಳದ ಪ್ರಾಂಗಣದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಸಭಾ ಭವನದ ವಿಜ್ಞಾಪನಪತ್ರ ಬಿಡುಗಡೆಗೊಳಿಸಲಾಯಿತು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ,ಅರ್ಚಕ ಕೃಷ್ಣ ಭಟ್, ಎನ್.ಕೆ. ಶಿವ, ಹರಿಪ್ರಸಾದ್ ಭಂಡಾರಿ,ರಾಜು ಪೂಜಾರಿ,  ಶ್ರೀನಿವಾಸ್ ನಾಯಕ್, ರವೀಂದ್ರ ಕಂಬಳಿ,ದೇವಿ ಪ್ರಸಾದ್ ಪೂಂಜಾ, ವೆಂಕಟೇಶ್ವರ ಭಟ್, ಡಾ.ಸುಬ್ರಾಯ ಹೊಳ್ಳ,ಶಿವರಾಮ ಮಯ್ಯ, ಸುಬ್ರಾಯ ಕಾರಂತ,ನಾರಾಯಣ ಭಟ್, ಧನೇಶ್ವರ ರಾವ್. ಪರಮೇಶ್ವರ ಮೊದಲಾದವರು ಉಪಸ್ಥಿತರಿದ್ದರು

By suddi9

Leave a Reply

Your email address will not be published. Required fields are marked *