ಬಂಟ್ವಾಳ:ನಾವು ಸಣ್ಣತನದ ಟೀಕೆಗಳನ್ನು ಬಿಟ್ಟು ಸಂಘಟಿತರಾಗದಿದ್ದರೆ ಮುಂದಿನ ದಿನದಲ್ಲಿ ದೇಶದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ. ಭಾರತವು ವಿಶ್ವಗುರುವಾಗಿ ಉಳಿದರೆ ಮಾತ್ರ ಜಗತ್ತಿಗೆ ಉಳಿಗಾಲವಿದ್ದು,ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ‘ವಂದೇ ಮಾತರಂ’ ಮಂತ್ರದೊಂದಿಗೆ ರಾಷ್ಟ್ರಕ್ಕಾಗಿ ದಿನಕ್ಕೆ ಒಂದು ಗಂಟೆಯನ್ನಾದರೂ ಮೀಸಲಿಡಬೇಕು ಮತ್ತು ಗೋಮಾತೆಯ ರಕ್ಷಣೆಗೆ ಪಣತೊಡಬೇಕು ಎಂದು ವಿ.ಹಿಂ.ಪ.ಮುಖಂಡ,ಬಿ.ಸಿ.ರೋಡಿನ ಖ್ಯಾತ ಯುವ ನ್ಯಾಯವಾದಿ  ಪ್ರಸಾದ್ ಕುಮಾರ್ ರೈ ಅವರು  ಕರೆ ನೀಡಿದ್ದಾರೆ.

ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಂದ ಆಯೋಜಿಸಲಾದಹಿಂದೂ ರಾಷ್ಟ್ರ ಜಾಗೃತಿ ಸಭೆ’ಯಲ್ಲಿ ಅವರು ದಿಕ್ಸೂಚಿ ಭಾಷಣಗೈದರು.ಜನಜಾಗೃತಿ ಸಮಿತಿಯ ಸಮನ್ವಯಕರಾದ  ವಿಜಯಕುಮಾರ್ ಅವರು ಮಾತನಾಡಿಲವ್ ಜಿಹಾದ್, ಮತಾಂತರ, ವಕ್ಫ್ ಕಾಯ್ದೆ ಮತ್ತು ದೇವಸ್ಥಾನಗಳ ಸರ್ಕಾರೀಕರಣದಂತಹ  ಆಪತ್ತುಗಳಿಂದ ಹಿಂದೂ ಸಮಾಜವನ್ನು ರಕ್ಷಿಸಲು ಭಾರತವನ್ನು ಸಂವಿಧಾನಬದ್ಧ ‘ಹಿಂದೂ ರಾಷ್ಟ್ರ’ವನ್ನಾಗಿ ಘೋಷಿಸುವುದೇ ಏಕೈಕ ಪರ್ಯಾಯವಾಗಿದೆ ಎಂದು ತಿಳಿಸಿದರು.

ಹಿಂದೂ ರಾಷ್ಟ್ರ ಸತ್ವಗುಣಿ ಸಾತ್ತ್ವಿಕ ಜನರ ರಾಷ್ಟ್ರವಾಗಿದೆ; ಇದನ್ನು ವಿರೋಧಿಸುವುದು ಮತಾಂಧರ ನಿತ್ಯದ ಕೆಲಸವಾಗಿದೆ ಎಂದ ಅವರು ಎಂದರು. ಕಳೆದ 20 ವರ್ಷಗಳಿಂದ ಸಮಿತಿಯು  ಜನರಲ್ಲಿ ಧರ್ಮಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದೆ ಎಂದರು.
ಸನಾತನ ಸಂಸ್ಥೆಯ ಗಣಪತಿ ಹೆಗಡೆ  ಅವರು ಮಾತನಾಡಿ, ನಮ್ಮ ಪ್ರತಿಯೊಂದು ಕೃತಿ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು,ಪಾಶ್ಚಾತ್ಯ ಅಂಧಾನುಕರಣೆ ಬಿಟ್ಟು ಶಾಸ್ತ್ರಬದ್ಧವಾಗಿ ಧರ್ಮಾಚರಣೆ ಮಾಡಿದಾಗ ಮಾತ್ರ ಆತ್ಮಬಲ ವೃದ್ಧಿಯಾಗಿ ಸಂಸ್ಕೃತಿ ಉಳಿಯಲು ಸಾಧ್ಯ ಎಂದರು.
ಹಲವಾರು ಗಣ್ಯರು,ಸ್ಥಳೀಯ ಪ್ರಮುಖರು,ಧಾರ್ಮಿಕ ಮುಖಂಡರು ಸಭೆಯಲ್ಲಿ ಭಾಗವಹುಸಿದ್ದರು

By suddi9

Leave a Reply

Your email address will not be published. Required fields are marked *