ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವರ ಬಿಂಬ ಪ್ರತಿಷ್ಠೆ,ಪರಿಕಲಶಾಭಿಷೇಕ ಸಹಿತ ಬ್ರಹ್ಮಕಲಶಾ ಭಿಷೇಕ ವೈಭವದಿಂದ ನಡೆಯಿತು.

ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ದೇವಸ್ಥಾನದ ಗರ್ಭ ಗುಡಿಗಿಂತಲೂ ಹೆಚ್ಚಾಗಿ ಭಕ್ತನ ಹೃದಯದಲ್ಲಿ ಚಾಮುಂಡೇಶ್ವರಿ ನೆಲೆಸುತ್ತಾಳೆ. ಅಂತಹ ತಾಯಿಯ ಕ್ಷೇತ್ರ ಇಂದು ಅಭಿವೃದ್ಧಿಗೊಂಡಿದ್ದು, ಹೃದಯ ತುಂಬಿ ಬಂದಿದೆ ಎಂದರು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಘು ಎಲ್.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಸಚಿವ ರಮಾನಾಥ ರೈ, ದೇವಸ್ಥಾನದ ಸ್ಥಂಸ್ಥಾಪಕರ ಪತ್ನಿ ಶಾರದಾ ಸದಾಶಿವ ಕರ್ಕೇರ, ಮಧುಗಿರಿ ಶ್ರೀ ಸಾಮ್ರಾಜ್ಯ ಲಕ್ಷ್ಮೀ ಮಹಾಸಂಸ್ಥಾನದ ಕೃಪಾನಿಧಿ ಗುರೂಜಿ, ತಪೋನಿಧಿ ಬಾಬಾ ವಿಠಲ ಗಿರಿ ಮಜಾರಾಜ್, ಬಡಗಬೆಳ್ಳೂರುಗ್ರಾ.ಪಂ. ಅಧ್ಯಕ್ಷೆ ರೂಪಶ್ರೀ ನಾರಾಯಣ ನಾಯ್ಕ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಭರತ್ ಬಂಗೇರ ಅಮ್ಮುಂಜೆ, ಧೀರಜ್ ನಾಯ್ಕ್, ಮಾಜಿ ಮೇಯರ್ ಭಾಸ್ಕರ್ ಕೆ., ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಟ್ರಸ್ಟ್ ಅಧ್ಯಕ್ಷ ವಸಂತ ಎಂ. ಬೆಳ್ಳೂರು, ಕಾರ್ಯಾಧ್ಯಕ್ಷ ಸಂದೀಪ್ ಸದಾಶಿವ ಬೆಳ್ಳೂರು,ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ  ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಕ್ಷೇತ್ರದ ಸೇವಾಕರ್ತರನ್ನು ಗೌರವಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ ಬಾಳಿಕೆ ಸ್ವಾಗತಿಸಿದರು. ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಪಳ್ಳಿಪ್ಪಾಡಿ ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟಿ ಶಶಿಕಿರಣ್ ವಂದಿಸಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ವಿ.ಪ.ಸದಸ್ಯ ಕಿಶೋರ್ ಕುಮಾರ್ ಬೋಟ್ಯಾಡಿ,ಬಂಟ್ವಾಳ ತಾ.ಪಂ.ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು ಸಹಿತ ಹಲವಾರು ಗಣ್ಯರು ಅಗಮಿಸಿ ದೆರವರದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. 

By suddi9

Leave a Reply

Your email address will not be published. Required fields are marked *