ಮುಂಬಯಿ, ಜ.24:  ಬೊರಿವಿಲಿ ಪೂರ್ವದ ದೇವುಲಪಾಡಾ ಇಲ್ಲಿ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ (ರಿ.) ಸಂಚಾಲಕತ್ವದಲ್ಲಿ ಸುಮಾರು ಐದುವರೆ ದಶಕಗಳಿಂದ ನಡೆಸಲ್ಪಡುವ ತುಳುನಾಡಿನ ವೀರ ದೈವಗಳಾದ ಕೋಟಿ ಚೆನ್ನಯ ಅವರ ಆರಾಧನಾ ಕೇಂದ್ರವಾದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಐವತ್ತ ಎರಡನೇ ಬ್ರಹ್ಮ ಬೈದರ್ಕಳ ನೇಮೋತ್ಸವ ಹಾಗೂ ವಾರ್ಷಿಕ ಮಹಾಪೂಜೆಗೆ ಇಂದಿಲ್ಲಿ ಶನಿವಾರ ಶಾಸ್ತ್ರೋಕ್ತವಾಗಿ ಚಾಲನೆಯನ್ನೀಡಲಾಯಿತು.
ವಾರ್ಷಿಕ ನೇಮೋತ್ಸವ ಪ್ರಯುಕ್ತ ಇಂದಿಲ್ಲಿ ಶನಿವಾರ ಅಪರಾಹ್ನ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಕಟಪಾಡಿ ಇವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಕಲಶ ಪ್ರತಿಷ್ಠೆಗೈದು ವಾರ್ಷಿಕ ನೇಮೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆಯನ್ನೀಡಲಾಯಿತು. ರಘು ಕೆ.ಕೋಟ್ಯಾನ್ ಅವರು ಗರಡಿಯಲ್ಲಿ ಸಾಂಪ್ರದಾಯಿಕವಾಗಿ ನೇಮೋತ್ಸವದ ವಿಧಿವಿಧಾನಗಳನ್ನು ನೆರವೇರಿಸಿದರು. ವಿದ್ವಾನ್ ಸುಕುಮಾರ್ ಭಟ್ ಬೈಕಲ ತನ್ನ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ಸಂಜೆ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ ಪರವಾಗಿ ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್, ಅಧ್ಯಕ್ಷ ಲಕ್ಷ ಣ ಎಸ್.ಸಾಲ್ಯಾನ್ ಮತ್ತು ಪದಾಧಿಕಾರಿಗಳು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದೈವಾರಾಧಕ ಶ್ರೀ ಬೂಬ ಪರವ (ಕೌಡೂರು, ಕಾರ್ಕಳ) ಇವರಿಗೆ ಪದಾಧಿಕಾರಿಗಳು ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪ, ಸ್ಮರಣಿಕೆ, ಸನ್ಮಾನಪತ್ರವನ್ನಿತ್ತು ಸನ್ಮಾನಿಸಿ ಅಭಿನಂದಿಸಿದರು. ಅಂತೆಯೇ ಕ್ಷೇತ್ರಕ್ಕೆ ಆದಿಯಿಂದ ಸೇವೆಗೈಯುತ್ತಿರುವ ದಾನಿಗಳು, ಭಕ್ತರು ಹಾಗೂ ಸೇವಾಕರ್ತರನ್ನು ವಿಶೇಷವಾಗಿ ಗೌರವಿಸಿದರು.
ಈ ಸಂದರ್ಭದಲ್ಲಿ ರಮೇಶ್ ಕೋಟ್ಯಾನ್ ಮಲ್ಲೂರು, ಶ್ರೀಮತಿ ಬೆರ್ಮು ಪರವ, ಬಾಳ್ಕಟ್ಟ ಗರಡಿ ಸುಕೇಶ್ ಪೂಜಾರಿ, ಕುರ್ಕಾಲ್ ಗರಡಿ ರವಿ ಪೂಜಾರಿ, ಸೇವಾ ಸಮಿತಿಯ ಉಪಾಧ್ಯಕ್ಷ ದಯಾನಂದ ಪೂಜಾರಿ ವಾರಂಗ, ಗೌ| ಪ್ರ| ಕಾರ್ಯದರ್ಶಿ ಸದಾಶಿವ ಡಿ.ಸಾಲ್ಯಾನ್ ವಾರಂಗ, ಗೌ| ಪ್ರ| ಕೋಶಾಧಿಕಾರಿ ಆಶೀಷ್ ಆರ್.ಕೋಟ್ಯಾನ್, ಜೊತೆ ಕಾರ್ಯದರ್ಶಿ ಕರುಣಾಕರ ಕೆ.ಕಾಪು, ಜೊತೆ ಕೋಶಾಧಿಕಾರಿ ಉಷಾ ಎಸ್.ಸಪಲಿಗ ವೇದಿಕೆಯಲ್ಲಿದ್ದು, ಕಾರ್ಯಕ್ರಮದಲ್ಲಿ ಸಮಿತಿಯ ಸಲಹೆಗಾರರು, ಕಾರ್ಯಕಾರಿ ಸಮಿತಿ, ಮಾಜಿ-ಹಾಲಿ ಪದಾಧಿಕಾರಿಗಳು, ಅರ್ಚಕ ವೃಂದ, ಯುವವಾಹಿನಿ ಮತ್ತು ಮಹಿಳಾ ಸಮಿತಿ ಹಾಗೂ ಸದಸ್ಯರನೇಕರು ಸೇರಿದಂತೆ ಸದಸ್ಯರನೇಕರು, ಅಪಾರ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡು ಶ್ರೀ ಜಗಧೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳರ ಕೃಪೆಗೆ ಪಾತ್ರರಾದರು.
ಕರುಣಾಕರ ಕೆ.ಕಾಪು ಸ್ವಾಗತಿಸಿದರು. ಉಷಾ ಎಸ್.ಸಪಲಿಗ ಸನ್ಮಾನಪತ್ರ ವಾಚಿಸಿದರು. ದಯಾನಂದ ಪೂಜಾರಿ ವಾರಂಗ ಪುರಸ್ಕೃತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. ಸದಾಶಿವ ಡಿ.ಸಾಲ್ಯಾನ್ ವಾರಂಗ ವಂದನಾರ್ಪಣೆಗೈದರು. ರಾತ್ರಿ ಬೈದರ್ಕಳ ದರ್ಶನ ನಡೆಸಲ್ಪಟ್ಟಿತು.
ರವಿವಾರ ಬೆಳಿಗ್ಗೆ ಗಣ ಹೋಮ, ದುರ್ಗಾ ಪೂಜೆ, ರಾತ್ರಿ ದೇವಿ ದರ್ಶನ ತದನಂತರ ಬೈದರ್ಕಳ ನೇಮ (ಕೋಲ), ಜೋಗಿ ಪುರುಷರ ಮತ್ತು ಮಾಯಂದಾಲಾ ನೇಮೋತ್ಸವವು ನೆರವೇರಿಸಲ್ಪಡುವುದು. ನೇಮೋತ್ಸವದಲ್ಲಿ ದೇವಿಪಾತ್ರಿ ಆಗಿ ಪ್ರಸಾದ್ ಸಾಲ್ಯಾನ್ ಕಲ್ಯ (ಮುಲುಂಡ್), ಮಧ್ಯಾಸ್ಥರಾಗಿ ನರ್ಸಪ್ಪ ಕೆ.ಮಾರ್ನಾಡ್, ಉಮೇಶ್ ಸುವರ್ಣ, ಬೈದರ್ಕಳರ ಪೂಜಾರಿಗಳಾಗಿ ಸುಕೇಶ್ ಪೂಜಾರಿ ಮತ್ತು ರವಿ ಪೂಜಾರಿ, ಗರಡಿ ಅರ್ಚಕರಾಗಿ ಸತೀಶ್ ಪೂಜಾರಿ (ಮಾಣಿಬೆಟ್ಟು ಗರಡಿ, ಶಿರ್ವ) ಸಹರಿಸಿದ್ದು, ಹರೀಶ್ ಪೂಜಾರಿ ಮತ್ತು ಬಳಗ ಘಾಟ್ಕೋಪರ್ ತಂಡದ ವಾದ್ಯ, ವಾಲಗದ ನೀನಾದದೊಂದಿಗೆ ಬೂಬ ಪರವ, ಜಯಕರ್ ಪರವ ಮತ್ತು ವಿಠಲ ಪರವ ಧಾರ್ಮಿಕ ಕೋಲ ನೇರವೇರಿಸಲಿರುವರು. ಸೋಮವಾರ ಮುಂಜಾನೆ  ಮಂಗಳ ನೇರವೇರಿಸಲಾಗುವುದು. ಎಂದು ಸೇವಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ. 

 
 

By suddi9

Leave a Reply

Your email address will not be published. Required fields are marked *