ಬಂಟ್ವಾಳ :ಮಂಗಳೂರು ಚೆಸ್ ಮಾಸ್ಟರ್ ಸಂಸ್ಥೆ ವತಿಯಿಂದ ಬಿ. ಸಿ. ರೋಡು ಸಿಟಿ ಮತ್ತು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಬಿ. ಸಿ.ರೋಡು ಸ್ಪರ್ಶಕಲಾ ಮಂದಿರದ ಸಭಾಂಗಣದಲ್ಲಿ 
ನಡೆದ ಜಿಲ್ಲಾ ಮಟ್ಟದ ರಾಪಿಡ್ ಚೆಸ್ ಪಂದ್ಯಾಟದಲ್ಲಿ 250ಕ್ಕೂ ಮಿಕ್ಕಿ ಸ್ಪರ್ಧಿಗಳು  ಭಾಗವಹಿಸಿ ಗಮನಸೆಳೆದರು.
ರೋಟರಿ ಜಿಲ್ಲಾ ವಾರ್ಷಿಕ ನಿಧಿ ಚೆರ್ಮನ್ ಸೂರ್ಯ ನಾರಾಯಣ ಕುಕ್ಕಾಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿ
ಬಾಲ್ಯದಿಂದಲೇ ಮಕ್ಕಳಿಗೆ ಚೆಸ್ ಕ್ರೀಡೆ ಬಗ್ಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿದಾಗ ಅವರ ಮನಸ್ಸು ಚುರುಕುಗೊಳ್ಳುತ್ತದೆ ಎಂದು  ಹೇಳಿದರು.

ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಮೆಲ್ಕಾರ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಕೆ. ಹರಿಕೃಷ್ಣ ಬಂಟ್ವಾಳ್,  ಪಿಂಗಾರ ಕೃಷಿ ಉತ್ಪಾದಕ ಸಂಸ್ಥೆ ನಿರ್ದೇಶಕಿ ಸಾಯಿಗೀತಾ ಅಳಿಕೆ ಶುಭ ಹಾರೈಸಿದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ,  ಬಿ. ಸಿ. ರೋಡು ಸಿಟಿ ರೋಟರಿ ಕ್ಲಬ್ ಸ್ಥಾಪಕಾಧ್ಯಕ್ಷ ಕೆ. ಸತೀಶ್ ಕುಮಾರ್,  ಕಾರ್ಯದರ್ಶಿ ಪೃಥ್ವಿರಾಜ್, ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ ಗೋಳ್ತಮಜಲು,
ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ವಿಜಯ ಫೆರ್ನಾಂಡಿಸ್, ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ, ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ,  ಮಾಜಿ ಅಧ್ಯಕ್ಷ ರಾದ ಅಂಟೋನಿ ಸಿಕ್ವೆರಾ, ಪದ್ಮರಾಜ ಬಲ್ಲಾಳ್ ಮಾತಂತೂರು, ರಾಘವೇಂದ್ರ ಭಟ್,

ಸುರೇಶ್ ಶೆಟ್ಟಿ ಸಿದ್ದಕಟ್ಟೆ, ನಿಯೋಜಿತ ಅಧ್ಯಕ್ಷರಾದ ಗೀತಾ ಪಿ. ಬಲ್ಲಾಳ್,  ಪ್ರಶಾಂತ್ ಕಾರಂತ್, ಮಾಜಿ ಅಧ್ಯಕ್ಷೆ ಪಲ್ಲವಿ ಕಾರಂತ್,
ಸಿದ್ದಕಟ್ಟೆ ವಲಯ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ, ದೈಹಿಕ ಶಿಕ್ಷಣ ಶಿಕ್ಷಕ ಚಿನ್ನಪ್ಪ ಕೆ. ಜಾಲ್ಸೂರು, ಪ್ರಮುಖರಾದ ಸುಭಾಶ್ಚಂದ್ರ ಜೈನ್,
ಜಯಪ್ರಕಾಶ್ ಜೆ.ಎಸ್., ರಾಜೇಶ್ ರಾಜಲಕ್ಷ್ಮಿ, ಸುಧೀರ್ ಶೆಟ್ಟಿ, ಉಮೇಶ್ ನೆಲ್ಲಿಗುಡ್ದೆ,  ದಿನೇಶ್ ಅಮೀನ್, ಚೆಸ್ ಸಂಸ್ಥೆಮುಖ್ಯಸ್ಥರಾದ ವಿಕ್ರಮ್ ಬಂಗೇರ, ವಜ್ರಾಕ್ಷಿ ವಿನೋದ್ ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *