ಬಂಟ್ವಾಳ: ಒಳ್ಳೆಯ ಹವ್ಯಾಸಗಳನ್ನು ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಗೆಳೆಯರ ಸಹವಾಸದಿಂದ ದುರಭ್ಯಾಸಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದು ನಿವೃತ್ತ ಆರೋಗ್ಯ ಮೇಲ್ವಚಾರಕ ಜಯರಾಮ ಪೂಜಾರಿ ಹೇಳಿದರು.

ಅವರು ಎಸ್.ವಿಎಸ್. ದೇವಳ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನಾಚರಣೆಯ ಅಂಗವಾಗಿ ಹೆಚ್‌ಐವಿ ಮತ್ತು ಏಡ್ಸ್ ಬಗ್ಗೆ ಮಾಹಿತಿ ನೀಡಿದರು.ಪ್ರಾಂಶುಪಾಲ ಕೆ.ಎನ್ ಗಂಗಾಧರ ಆಳ್ವ ಸಭಾದ್ಯಕ್ಷತೆ ವಹಿಸಿದ್ದರು.
ತಾಲೂಕು ಸಾರ್ವಜನಿಕ ಆಸ್ಪತ್ರೆ ಬಂಟ್ವಾಳದ ದಂತವೈದ್ಯೆ ಡಾ. ಆರತಿ ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಾಯಿ ಮತ್ತು ಹಲ್ಲಿನ ಆರೋಗ್ಯವನ್ನು ಕಾಪಾಡುವ ಬಗ್ಗೆ ತಿಳಿಸಿದರು. ಮಕ್ಕಳತಜ್ಞೆ ಡಾ. ಪ್ರತೀಷ ಮಾತನಾಡಿ ಹದಿಹರೆಯದಲ್ಲಿ ಹಾದಿ ತಪ್ಪದಂತೆ ಎಚ್ಚರ ವಹಿಸಬೇಕೆಂದರು .
ಆರೋಗ್ಯ ಮಿತ್ರ ಆಯುಷ್ಮಾನ್ ವಿಭಾಗದ ಉಷಾ ಮಾತನಾಡಿ ವಿವಿಧ ಆರೋಗ್ಯ ಸೌಲಭ್ಯಗಳ ಬಗ್ಗೆ ಹೇಳಿದರು. ಆರೋಗ್ಯ ಮೇಲ್ವಚಾರಕಿ ಕುಸುಮ, ಐಸಿಟಿಸಿ ಆಪ್ತ ಸಮಾಲೋಚಕಿ ವಾಣಿ , ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕಿ ಅಕ್ಷತಾ ಉಪಸ್ಥಿತರಿದ್ದು ವಿವಿಧ ಮಾಹಿತಿಗಳನ್ನು ನೀಡಿದರು.
ಕನ್ನಡ ಉಪನ್ಯಾಸಕರಾದ ಜಯಾನಂದ ಪೆರಾಜೆ ಸ್ವಾಗತಿಸಿದರು. ವೆಂಕಟೇಶ ನಾಯಕ್ ವಂದಿಸಿದರು.
