ಬಂಟ್ವಾಳ: ಪುದು,ಕೊಡ್ಮಾಣ್,ಕಳ್ಳಿಗೆ, ತುಂದೆ, ಅರ್ಕುಳ ಮತ್ತು ಮೇರಮಜಲು ಗ್ರಾಮಗಳನ್ನು ಕೇಂದ್ರವಾಗಿಟ್ಟುಕೊಂಡು ಕಳೆದ 48ದಿನಗಳಿಂದ ಪ್ರತಿ ಮನೆ ಮನಗಳಲ್ಲಿ ಸಾಮೂಹಿಕ ರಾಮ ಮಂತ್ರ ಪಠನದೊಂದಿಗೆ ಆರಂಭಗೊಂಡ  ಶ್ರೀ ರಾಮ ನಾಮ ತಾರಕ ಜಪ ಯಜ್ಞ ನೆತ್ತರಕೆರೆಯಲ್ಲಿ ಸಂಪನ್ನಗೊಂಡಿತು.

ವೇದಮೂರ್ತಿ ಕಶೆಕೊಡಿ ಸೂರ್ಯ ನಾರಾಯಣ ಭಟ್ ಅವರ ನೇತೃತ್ವದಲ್ಲಿ ವಿವಿಧ ವೈಧಿಕ ವಿಧಿ ವಿಧಾನಗಳೊಂದಿಗೆ ರಚಿಸಲಾದ 10 ಕುಂಡಗಳಲ್ಲಿ  ಯಜ್ಞ ಆರಂಭಗೊಂಡಿತು.1 ಕುಂಡದಲ್ಲಿ ವೈಧಿಕರು ಹಾಗೂ ಉಳಿದ 9 ಕುಂಡಗಳಲ್ಲಿ ಮುಂಜಾನೆಯೇ9 ಕುಂಡಗಳಲ್ಲಿ ಶ್ರೀ ರಾಮ ಭಕ್ತರು  ಕುಟುಂಬ ಸಮೇತರಾಗಿ ಭಕ್ತಿ ಭಾವದಿಂದ ಖುದ್ದು ಹವಿಸ್ಸು ಅರ್ಪಿಸುವ ಮೂಲಕ ಪೂರ್ಣಾಹುತಿಗೊಂಡು ಮಂಗಳಾರತಿಯೊಂದಿಗೆ ಯಾಗ ಸಂಪನ್ನಗೊಂಡಿತು.

  ಮುಂಜಾನೆ ಯಾಗ ಸ್ಥಳದಲ್ಲಿ ಗಣಪತಿ ಹೋಮ ನಡೆದು ಬಳಿಕ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಧ್ವಜಾರೋಹಣ ಹಾಗೂ ಗೋ ಪೂಜೆಯನ್ನು ನೆರವೇರಿಸಿ ಶುಭಹಾರೈಸಿದರು.ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *